ಸುಕ್ಮಾ ನಕ್ಸಲ್ ದಾಳಿಯಲ್ಲಿ ತನ್ನೋರ್ವ ಮಗನನ್ನು ಕಳೆದುಕೊಂಡರೂ ಮತ್ತೋರ್ವ ಮಗನನ್ನೂ ಸೇನೆಗೆ ಕಳುಹಿಸಲು ಮುಂದಾಗಿದೆ ತಮಿಳುನಾಡಿನ ಮುಧುರೈ ಮೂಲದ ಯೋಧರ ಕುಟುಂಬ.
28 ವರ್ಷದ ಪಿ.ಅಲಗುಪಾಂಡಿ ಸೋಮವಾರ ಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ವೀರ ಮರಣವನ್ನಪ್ಪಿದ್ದಾರೆ. ಅವರ ಸಾವು ಅವರ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಆದರೂ ಎದೆಗುಂದದ ಈ ಕುಟುಂಬ ತಮ್ಮ ಮತ್ತೊಬ್ಬ ಪುತ್ರನನ್ನೂ ಸೇನೆ ಕಳುಹಿಸಲು ದೃಢ ನಿರ್ಧಾರ ಮಾಡಿದೆ.
ಅಲಗುಪಾಂಡಿ ಅವರ ತಂದೆ ಪಿತ್ಚಿಯಲಗು ಕೂಡ ಮಾಜಿ ಸೈನಿಕರಾಗಿದ್ದು, 2009ರಲ್ಲಿ ತಮ್ಮ ದೊಡ್ಡ ಮಗನನ್ನು ಸೇನೆಗೆ ಸೇರಿಸಿದ್ದರು. ಇದೀಗ ಆತ ಹುತಾತ್ಮನಾಗಿದ್ದಾನೆ. ಆದರೂ ದೈರ್ಯಗೆಡದ ಇವರು ಮತ್ತೋರ್ವ ಮಗ ಪವಿತ್ರನ್ ಅವರನ್ನೂ ಸೇನೆಗೆ ಸೇರಿಸಲು ಮುಂದಾಗಿದ್ದಾರೆ. ಈಗಾಗಲೇ ಆತ ಆಯ್ಕೆಗೊಂಡಿದ್ದು, ಮುಂದಿನ ತಿಂಗಳೇ ಸೇನೆಗೆ ಸೇರುತ್ತಿದ್ದಾನೆ.
ಇವರ ಕುಟುಂಬದ ಬಹುತೇಕರು ಸೈನಿಕರಾಗಿದ್ದು, ಪಿತ್ಚಿಯಲಗು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನೂ ಯೋಧರಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.