ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಮೂರು ದಿನಗಳ ಚೀನಾ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸದ ಮೊದಲ ದಿನವನ್ನು ಅವರು ಪುರಾತನ ನಗರವಾದ ಕ್ಸಿಯಾನ್ನಲ್ಲಿ ಕಳೆಯಲಿದ್ದಾರೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ತವರು ನಗರವೂ ಹೌದು.
ಇಂದು ಬೆಳಿಗ್ಗೆ ಅವರು ಕ್ಸಿಯಾನ್ನಲ್ಲಿ ದಕ್ಷಿಂಶನ್ ದೇಗುಲದ ಮ್ಯೂಸಿಯಂಗೆ ಭೇಟಿ ನೀಡಿದರು. ಇದು ಚೀನಾದ ಅತಿ ಪುರಾತನ ಬೌದ್ಧ ದೇಗುಲವಾಗಿದೆ. ಇಲ್ಲಿನ ವಿಸಿಟರ್ ಬುಕ್ನಲ್ಲಿ ಅವರು ‘ಅದ್ಭುತ ಕಾಳಜಿಯೊಂದಿಗೆ ಈ ಮ್ಯೂಸಿಯಂನ್ನು ಸಂರಕ್ಷಿಸಿಡಲಾಗಿದೆ, ಇದು ನನ್ನನ್ನು ಅತೀವ ಪ್ರಭಾವಿತಗೊಳಿಸಿದೆ’ ಎಂದು ಬರೆದಿದ್ದಾರೆ.
ಮಧ್ಯಾಹ್ನದ ವೇಳೆ ಮೋದಿ ಜಿನ್ಪಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ನಾಳೆ ಮತ್ತು ನಾಡಿದ್ದು ಮೋದಿ ಬೀಜಿಂಗ್ ಮತ್ತು ಶಾಂಘೈ ನಗರಗಳಿಗೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.