ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಮತ್ತೆ ಕ್ರಿಕೆಟ್ ಪಂದ್ಯಾಟ ಆರಂಭಿಸುವ ಪ್ರಸ್ತಾವಣೆಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.
ಈ ವಿಷಯದ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಫಲಪ್ರದವಾಗಿದ್ದು, ಸರ್ಕಾರ ಪಾಕ್ನೊಂದಿಗೆ ಕ್ರಿಕೆಟ್ ಬಾಂಧವ್ಯ ಪುನರಾರಂಭಿಸಲು ಉತ್ಸುಹುಕತೆ ತೋರಿಸಿದೆ.
ಪಾಕ್ನೊಂದಿಗೆ ಕ್ರಿಕೆಟ್ ಪಂದ್ಯಾಟ ನಡೆಸಲು ಸರ್ಕಾರದ ಯಾವುದೇ ಆಕ್ಷೇಪವಿಲ್ಲ, ಮೊದಲ ಪಂದ್ಯ ಪಾಕ್ ಪ್ರಸ್ತಾಪದಂತೆ ಯುಎಇನಲ್ಲಿ ಡಿಸೆಂಬರ್ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ.
26/11ರ ಮುಂಬಯಿ ದಾಳಿಯ ಬಳಿಕ ಪಾಕ್ನೊಂದಿಗೆ ಭಾರತದ ಕ್ರಿಕೆಟ್ ಆಡುವುದನ್ನು ನಿಲ್ಲಿಸಿತ್ತು. ಇದೀಗ ಮತ್ತೆ ಕ್ರಿಕೆಟ್ ಬಾಂಧವ್ಯ ಮುಂದುವರೆಯುತ್ತಿದ್ದು ಅಭಿಮಾನಿಗಳಲ್ಲಿ ಕಾತರ ಮೂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.