ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಅಲ್ಲದೇ ಆರೋಗ್ಯದ ಕಾಳಜಿಯನ್ನು ಪ್ರಚಾರಪಡಿಸುವುದಕ್ಕಾಗಿಯೇ ತಮ್ಮ ಸರ್ಕಾರ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದೆ ಎಂದರು.
ಇತರ ನಗರಗಳಿಗೂ ಮಾದರಿ ಎನಿಸುವ ರೀತಿಯಲ್ಲಿ ಸ್ವಚ್ಛತೆಯ ಹವ್ಯಾಸವನ್ನು ಅಳವಡಿಸಿಕೊಂಡಿರುವ ಸೂರತ್ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
‘ಶ್ರಮ ಮತ್ತು ಕೌಟುಂಬಿಕ ಮೌಲ್ಯದ ಮೇಲೆ ಕಿರಣ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ವಾಜಪೇಯಿ ನಂತರ 15 ವರ್ಷಗಳ ಬಳಿಕ ಆರೋಗ್ಯ ಕಾಳಜಿ ನಿಯಮವನ್ನು ಭಾರತಕ್ಕೆ ನಾವು ತಂದಿದ್ದೇವೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.