ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ.
18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ತನ್ನ ಬುದ್ಧಿಮತ್ತೆಯನ್ನು ಸಾಬೀತುಪಡಿಸಿದ್ದಾನೆ.
ಮಾರ್ಚ್ನಲ್ಲಿ ಈತ ಪರೀಕ್ಷೆ ಬರೆದಿದ್ದು, ಶೇ.63ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾನೆ. ತೆಲಂಗಾಣದ 12ನೇ ತರಗತಿ ಫಲಿತಾಂಶ ಭಾನುವಾರ ಪ್ರಕಟಗೊಂಡಿತ್ತು. ಪರೀಕ್ಷೆ ಬರೆಯಲು ಇಲ್ಲಿ ವಯಸ್ಸಿನ ಮಿತಿ ಇಲ್ಲ.
ಅಗಸ್ತ್ಯಾ ಪಿಎಚ್ಡಿ ಪದವಿ ಪಡೆದ ಅತೀ ಕಿರಿಯ ಆಟಗಾರ್ತಿ ಎಂಬ ಕೀರ್ತಿ ಹೊಂದಿರುವ ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೈನ ಜೈಸ್ವಾಲ್ ಅವರ ಸಹೋದರ. ಈಕೆ 15ನೇ ವಯಸ್ಸಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.