ನವದೆಹಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) 2017ರ ಮೇನಲ್ಲಿ ’ಸೌತ್ ಏಷ್ಯಾ ಸೆಟ್ಲೈಟ್’ನ್ನು ಉಡಾವಣೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಸೆಟ್ಲೈಟ್ ಯೋಜನೆಯಿಂದ ಸೌತ್ ಏಷ್ಯಾದ ಎಲ್ಲಾ ರಾಷ್ಟ್ರಗಳಿಗೂ ಅನುಕೂಲವಾಗಲಿದೆ. ಯೋಜನೆಯಿಂದ ಪಾಕಿಸ್ಥಾನದ ಹೆಸರನ್ನು ಕೈಬಿಡಲಾಗಿದೆ.
ಮೂಲಗಳ ಪ್ರಕಾರ ಮೇ 5 ರಂದು ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-09 ರಾಕೆಟ್ ಮೂಲಕ ‘ಸೌತ್ ಏಷ್ಯಾ ಸೆಟ್ಲೈಟ್’ನ್ನು ಉಡಾವಣೆಗೊಳಿಸಲಾಗುತ್ತಿದೆ.
ಈ ಸೆಟ್ಲೈಟ್ ನೆರೆಹೊರೆಯ ರಾಷ್ಟ್ರಗಳಿಗೆ ಭಾರತದ ಕೊಡುಗೆ ಎಂದು 2014ರ ಸಾರ್ಕ್ ಸಮಿತ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಈ ಯೋಜನೆಯ ಭಾಗವಾಗಲು ಪಾಕಿಸ್ಥಾನ ನಿರಾಕರಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.