ಲಕ್ನೋ: ಶ್ರೇಷ್ಠ ನಾಯಕರುಗಳ ಜನ್ಮ ಜಯಂತಿಯ ಸಂದರ್ಭದಲ್ಲಿ ಉತ್ತರಪ್ರದೇಶದ ಶಾಲೆಗಳು ತೆರೆದಿರಲಿವೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಘೋಷಣೆ ಮಾಡಿದ್ದಾರೆ.
ಧೀಮಂತ ನಾಯಕರ ಜನ್ಮ ದಿನಾಚರಣೆಯಂದು ರಜೆ ನೀಡುವ ಬದಲು, ಅವರ ಜೀವನ, ಕಾರ್ಯ, ಸಿದ್ಧಾಂತಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ, ಇದಕ್ಕಾಗಿ ಶಾಲೆಗಳನ್ನು ತೆರೆದಿಡಲಾಗುತ್ತದೆ ಎಂದು ಯೋಗಿ ಹೇಳಿದ್ದಾರೆ.
ಈ ವಾರಪೂರ್ತಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವಂತೆ ಪ್ರಾಥಮಿಕ ಶಾಲೆಗಳಿಗೆ ಯೋಗಿ ಆದೇಶ ನೀಡಿದ್ದಾರೆ.
ಜಯಂತಿಗಳು ಮತ್ತು ರಾಷ್ಟ್ರೀಯ ರಜೆಗಳ ಹಿನ್ನಲೆಯಲ್ಲಿ ಶಾಲೆಗಳಿಗೆ ಒಟ್ಟು 120 ರಜೆಗಳು ಸಿಗುತ್ತವೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.