ಕಾಬೂಲ್: ಅಮೆರಿಕಾ ಹಾಕಿದ ‘ಬಾಂಬ್ಗಳ ತಾಯಿ’ ಎಂದೇ ಕರೆಯಲ್ಪಡುವ ಅತೀದೊಡ್ಡ ಬಾಂಬ್ಗೆ ಅಫ್ಘಾನಿಸ್ತಾನದಲ್ಲಿ 36 ಇಸಿಸ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಗುರುವಾರ ಇಸಿಸ್ ಉಗ್ರರನ್ನು ಗುರಿಯಾಗಿರಿಸಿಕೊಂಡು ಅಮೆರಿಕಾ ಜಿಬಿಯು-43 ಎಂಬ ಅತೀದೊಡ್ಡ ಬಾಂಬ್ನ್ನು ಹಾಕಿತ್ತು, ಈ ಬಾಂಬ್ನ ತೂಕ 20 ಸಾವಿರ ಪೌಂಡ್ ಆಗಿದೆ.
ಈ ಬಾಂಬ್ ದಾಳಿಗೆ 36 ಉಗ್ರರು ಸಾವನ್ನಪ್ಪಿದ್ದು ಮಾತ್ರವಲ್ಲ, ಅವರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ನಾಶವಾಗಿವೆ ಎಂದು ಅಫ್ಘಾನಿನ ಕಾಬೂಲ್ ಸಚಿವಾಲಯದ ವಕ್ತಾರ ಮೊಹಮ್ಮದ್ ರದ್ಮನಿಷ್ ಸ್ಪಷ್ಟಪಡಿಸಿದ್ದಾರೆ.
ನಾಗರಿಕರಿಗೆ ಈ ದಾಳಿಯಿಂದ ಯಾವುದೇ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.