ರಾಯ್ಪುರ: ರಾಜಕಾರಣಿಗಳೆಂದರೆ ಅಹಂಕಾರ, ದರ್ಪ ತೋರ್ಪಡಿಸುವವರು ಎಂಬ ಭಾವನೆ ಎಲ್ಲರಲ್ಲಿಯೂ ಇದೆ, ಆದರೂ ಬಹಳಷ್ಟು ರಾಜಕಾರಣಿಗಳು ಅಧಿಕಾರದ ಉತ್ತುಂಗದಲ್ಲಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಅಂತಹ ರಾಜಕಾರಣಿಗಳಲ್ಲಿ ಛತ್ತೀಸ್ಗಢದ ಮುಖ್ಯಮಂತ್ರಿ ರಮಣ್ ಸಿಂಗ್ ಅವರೂ ಒಬ್ಬರು.
‘ಲೋಕಸೂರಜ್ ಅಭಿಯಾನ’ ಹಮ್ಮಿಕೊಂಡಿರುವ ರಮಣ್ ಸಿಂಗ್ ರಾಜ್ಯದ ಮೂಲೆ ಮೂಲ್ಗಳು ಭೇಟಿಕೊಟ್ಟು ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಆಲಿಸುತ್ತಿದ್ದಾರೆ. ಆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಆಗಿದೆಯೇ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ರೀತಿ ನಿನ್ನೆ ಜಮ್ಹಾರಿ ಗ್ರಾಮಕ್ಕೆ ತೆರಳಿ ಅಲ್ಲಿನ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದ ಅವರು ಬಳಿಕ ಅಲ್ಲೇ ಇದ್ದ ಸರ್ಕಾರ ಶಾಲೆಗೆ ತೆರಳಿ ಶಾಲಾ ಮಕ್ಕಳೊಂದಿಗೆ ಕೂತು ಮಧ್ಯಾಹ್ನದ ಬಿಸಿಯೂಟವನ್ನು ಸೇವನೆ ಮಾಡಿದರು.
ಬಿಸಿಯೂಟದ ಗುಣಮಟ್ಟವನ್ನು ಶ್ಲಾಘಿಸಿದ ಅವರು 5 ಅಡುಗೆ ತಯಾರಕರಿಗೆ 5 ಸಾವಿರ ಮೊತ್ತದ ಟೋಕನ್ ವಿತರಿಸಿದರು. ವಿದ್ಯಾರ್ಥಿಗಳಿಗೆ ಚಾಕೋಲೆಟ್ ಹಂಚಿಕೆ ಮಾಡಿದರು. ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು.
ಈ ಅಭಿಯಾನದ ಮೂರನೇ ಹಂತ ಎ.4ರಂದು ಆರಂಭಗೊಂಡಿದ್ದು, ಮೇ 20ರವರೆಗೂ ಮುಂದುವರೆಯಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.