ಲಖನೌ: ಚುನಾವಣಾ ಪ್ರಣಾಳಿಕೆಯಲ್ಲಿನ ಒಂದೊಂದೇ ಭರವಸೆಯನ್ನು ಈಡೇರಿಸುತ್ತ ಸಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಇದೀಗ ಹೆಣ್ಣು ಮಗುವಿನ ಯೋಗಕ್ಷೇಮಕ್ಕೆ ಮುಂದಾಗಿದ್ದಾರೆ.
ಆರ್ಥಿಕ ದುರ್ಬಲರ ಮನೆಯಲ್ಲಿ ಹೆಣ್ಣು ಶಿಶು ಜನಿಸಿದರೆ, ಮಗುವಿನ ಹೆಸರಿನಲ್ಲಿ 50,000 ರೂಪಾಯಿಯ ಬಾಂಡ್ ನೀಡುವ ಭಾಗ್ಯಲಕ್ಷ್ಮೀ ಯೋಜನಾ ಕುರಿತು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಬಿಜೆಪಿಯ ಲೋಕ ಕಲ್ಯಾಣ ಸಂಕಲ್ಪ ಪಾತ್ರದಲ್ಲಿ ನಮೂದಿಸಿದಂತೆ ಹೆಣ್ಣು ಮಗುವಿನ ಜನನವಾದರೆ ಅದರ ಹೆಸರಿನಲ್ಲಿ ನೀಡಲಾಗುವ ಬಾಂಡ್ ಯೋಜನೆ ಕುರಿತು ಸೂಕ್ತ ತಯಾರಿ ನಡೆಸುವಂತೆ ಸಿ.ಎಂ ಯೋಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವಿಧವಾ ವೇತನ, ವಿಧವಾ ಪುನಃರ್ವಿವಾಹಕ್ಕೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನದಲ್ಲಿ ಹೆಚ್ಚಳ, ಅಲ್ಲದೇ ವರದಕ್ಷಿಣೆ ಕಿರುಕುಳ ಅನುಭವಿಸುತ್ತಿರುವವರಿಗೆ ನೀಡುವ ಹಣದಲ್ಲಿ ಹೆಚ್ಚಳ ಮಾಡುವ ಕುರಿತೂ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿದ್ದಾರಂತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.