ಧಾರವಾಡ: ಸುನಿಧಿ ಕಲಾ ಸೌರಭ ಸಂಸ್ಥೆ ಕಳೆದ 10 ವರ್ಷಗಳಿಂದ ಬಡ ಹಾಗೂ ಅನಾಥ, ಅವಕಾಶ ವಂಚಿತ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಮಾದರಿ ಎಂದು ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು.
ಅವರು ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆ ಹಾಗೂ ಸರ್ಕಾರಿ ನಿರ್ದಿಷ್ಟ ವರ್ಗಗಳ ಮಕ್ಕಳ ನಿವಾಸ ಶಾಲೆ ಘಂಟಿಕೇರಿ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ಸಭಾ ಭವನದಲ್ಲಿ ನಡೆದ ಸುನಿಧಿ ಕಲಾ ಸೌರಭ ಹುಬ್ಬಳ್ಳಿ ಆಯೋಜಿಸಿದ ಸ್ಫೂರ್ತಿ ಮಕ್ಕಳ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಸ್.ಎಸ್. ಕೆಳದಿಮಠ ಅವರು ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ ಗಂಗಾಧರ, ಎಂ. ಎಲ್. ಹಂಚಾಟೆ, ಯು.ವೈ. ಬೊಮ್ಮಕ್ಕನವರ, ಎಸ್. ಕೆ. ಚಿಕ್ಕಮಠ, ಮಕ್ಕಳ ಸಾಹಿತಿ ನಿಂಗಣ್ಣ ಕುಂಠಿ ಹಾಗೂ ಸುನಿಧಿ ಕಲಾ ಸೌರಭದ ಅಧ್ಯಕ್ಷ ಸುಭಾಸ್ ನರೇಂದ್ರ ಉಪಸ್ಥಿತರಿದ್ದರು.
ಮಕ್ಕಳು ಈ ಶಿಬಿರದಲ್ಲಿ ಕಲಿತಂತಹ ಕರಕುಶಲ, ಹಾಗೂ ಪೇಪರ್ ಕ್ರಾಫ್ಟ್ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಬಿರದ ಮಕ್ಕಳು ನೃತ್ಯ ಮಾಡಿ, ಭಕ್ತಿ ಗೀತೆ, ಜನಪದ ಗೀತೆ ಹಾಡಿ ರಂಜಿಸಿದರು. ಶಿಕ್ಷಕಿಯರ ಸರ್ಕಾರಿ ತರಬೇತಿ ಸಂಸ್ಥೆಯ ಪ್ರಾಚಾರ್ಯೆ ವಿದ್ಯಾ ಅಶೋಕ ನಾಡಿಗೇರ ಈ ಶಿಬಿರ ನಡೆದ ಬಂದ ದಾರಿಯನ್ನು ವಿವರಿಸಿದರು. ಈ ಶಿಬಿರದಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಿಬಿರ ಸಂಚಾಲಕಿ ರಾಷ್ಟ್ರ ಪ್ರಶಸ್ತಿ ವಿಭೂಷಿತೆ ವೀಣಾ ಅಠವಲೆ ನಿರೂಪಿಸಿದರು. ನಿವಾಸ ಶಾಲೆಯ ಪ್ರಧಾನ ಗುರು ಮಾತೆ ಮೇನಕಾ ಮಠದ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.