ಖಂಡ್ವಾ (ಮಧ್ಯಪ್ರದೇಶ): ಮತಾಂತರ ಮಾಡಲೆತ್ನಿಸಿದ ಆರೋಪದ ಮೇಲೆ ಮೂವರು ಕ್ರಿಶ್ಚಿಯನ್ರನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಖಂಡ್ವಾ ಜಿಲ್ಲೆಯಲ್ಲಿ ಒತ್ತಾಯಪೂರ್ವಕವಾಗಿ ತಮ್ಮ ಧರ್ಮಕ್ಕೆ ಮತಾಂತರ ಮಾಡಲೆತ್ನಿಸಿದರು ಎಂದು ಗ್ರಾಮದ ರಾಜು ಕೊಟ್ಟ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಸೀತಾಬೇರಿ ಎಂಬ ಹಳ್ಳಿಯಲ್ಲಿ ಈ ರೀತಿಯ ಕ್ಯಾಂಪ್ ನಡೆಸಿದ್ದೂ ಅಲ್ಲದೇ, ಬುಡಕಟ್ಟು ಪ್ರದೇಶದಲ್ಲಿ ಬೈಬಲ್ ಹಾಗೂ ತಮ್ಮ ಧರ್ಮದ ಅಧಿಕ ಚಿಹ್ನೆಯನ್ನೂ ಕೊಡಲಾಗಿದೆ ಎಂದು ರಾಜು ದೂರಿನಲ್ಲಿ ತಿಳಿಸಿದ್ದಾರೆ.
ಏಸುವನ್ನು ನಂಬಿದ್ದೇ ಆದಲ್ಲಿ ನಿಮ್ಮೆಲ್ಲ ಕಷ್ಟಗಳು, ರೋಗ ರುಜಿನಗಳು ಗುಣಮುಖವಾಗುತ್ತವೆ ಎಂದು ಆ ಮೂವರು ನಂಬಿಸಲು ಯತ್ನಿಸುತ್ತಿದ್ದರು ಎಂದು ಗ್ರಾಮದ ಜನರು ತಿಳಿಸಿದ್ದಾರೆ.
ಆರೋಪಿಗಳು ಬರ್ಹಾನ್ಪುರ್, ಮಹರಾಷ್ಟ್ರ ಹಾಗೂ ಬದ್ವಾನಿ ಪ್ರದೇಶದವರು ಎನ್ನಲಾಗಿದೆ. ಅಲ್ಲದೇ ಈಗಾಗಲೇ ೫೦ಕ್ಕೂ ಹೆಚ್ಚು ಜನರನ್ನು ಮತಾಂತರಗೊಳಿಸಲಾಗಿದೆ ಎಂದು ಜನ ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.