ನವದೆಹಲಿ: ದೇಶದಲ್ಲಿ ಕೋಟ್ಯಾಂತರ ಜನ ಹಸಿವಿನಿಂದ ನರಳುತ್ತಿದ್ದಾರೆ, ಆದರೆ ರೆಸ್ಟೋರೆಂಟ್ಗಳಲ್ಲಿ ಶ್ರೀಮಂತರು ಆಹಾರವನ್ನು ಬೇಕಾಬಿಟ್ಟಿಯಾಗಿ ಹಾಳು ಮಾಡುತ್ತಿದ್ದಾರೆ.
ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ನರೇಂದ್ರ ಮೋದಿ ಸರ್ಕಾರ ರೆಸ್ಟೋರೆಂಟ್ಗಳಲ್ಲಿ ಎಷ್ಟು ಪ್ರಮಾಣದ ಆಹಾರಗಳನ್ನು ಸರ್ವ್ ಮಾಡಬೇಕು ಎಂಬುದನ್ನು ಫಿಕ್ಸ್ ಮಾಡಲು ಯೋಜಿಸಿದೆ.
ಫುಡ್ ಇಂಡಸ್ಟ್ರಿಯಲ್ಲಿರುವ ಜನರೊಂದಿಗೆ ಮಾತುಕತೆ ನಡೆಸಿ ಎಷ್ಟು ಪ್ರಮಾಣದಲ್ಲಿ ಗುಣಮಟ್ಟದ ಆಹಾರಗಳನ್ನು ಸರ್ವ್ ಮಾಡಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದಾಗಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
‘ಆಹಾರ ಹಾಳಾಗುತ್ತಿರುವುದನ್ನು ರೆಸ್ಟೋರೆಂಟ್ಗೆ ಹೋದ ಸಂದರ್ಭದಲ್ಲಿ ನೋಡಿದ್ದೇನೆ. ಬಡವರು ಇರುವ ದೇಶದಲ್ಲಿ ಇಂತಹುದನ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ.
ರೆಸ್ಟೋರೆಂಟ್ ಮತ್ತು ಇಂಡಸ್ಟ್ರಿಯವರಿಗೆ ಮಾತುಕತೆ ಕರೆದಿದ್ದೇನೆ, ಕಾನೂನಾತ್ಮಕವಾಗಿ ಆಹಾರದ ಪ್ರಮಾಣವನ್ನು ಫಿಕ್ಸ್ ಮಾಡಬಹುದೇ ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ’ ಎಂದಿದ್ದಾರೆ.
ಎಷ್ಟು ಸರ್ವ್ ಮಾಡಬಹುದು ಮತ್ತು ಎಷ್ಟು ಗ್ರಾಹಕರು ತಿನ್ನಬಹುದು ಎಂಬ ಬಗ್ಗೆ ಸರ್ಕಾರ ಪ್ರಶ್ನೋತ್ತರಗಳನ್ನು ತಯಾರಿಸಿ ರೆಸ್ಟೋರೆಂಟ್ಗಳಿಗೆ ನೀಡಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.