ನವದೆಹಲಿ: ದೇಶದಾದ್ಯಂತ ಇಂದು ಶ್ರೀರಾಮನ ಬಂಟ ಹನುಮಂತನ ಜನ್ಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.
ಟ್ವ್ವಿಟ್ ಮಾಡಿರುವ ಅವರು, ‘ದೇಶದ ಎಲ್ಲಾ ಜನತೆಗೂ ಹನಮ ಜಯಂತಿಯ ಶುಭಕಾಮನೆಗಳು’ ಎಂದಿದ್ದಾರೆ.
ಚೈತ್ರ ಮಾಸದ ಶುಕ್ಲ ಪಕ್ಷದ 15ನೇ ದಿನ ಹನಮ ದೇವರ ಜಯಂತಿಯನ್ನು ಆಚರಿಸಲಾಗುತ್ತದೆ.
ಇದೇ ವೇಳೆ ಮೋದಿಯವರು ಸಮಾಜ ಸುಧಾರಕ ಮಹಾತ್ಮ ಪುಲೆ ಅವರ ಜನ್ಮ ಜಯಂತಿಯ ಶುಭಾಶಯವನ್ನೂ ತಿಳಿಸಿದ್ದಾರೆ.
‘ಮಹಾತ್ಮ ಪುಲೆಗೆ ನನ್ನ ಗೌರವ ನಮನಗಳು, ಸಮಾಜ ಸುಧಾರಣೆ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕಾಗಿ ಅವರು ಮಾಡಿದ ನಿಸ್ವಾರ್ಥ ಸೇವೆ ಬದಲಾವಣೆಯನ್ನು ತಂದಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.