ನವದೆಹಲಿ: 3310, ನೋಕಿಯಾ 3 ಮತ್ತು 5ಗಳ ಮೂಲಕ ಸ್ಮಾರ್ಟ್ಫೋನ್ ಮಾರ್ಕೆಟ್ಗೆ ಕಮ್ಬ್ಯಾಕ್ ಮಾಡುತ್ತಿರುವ ನೋಕಿಯಾ, ಇದೀಗ 5ಜಿ ನೆಟ್ವರ್ಕ್ನ್ನು ಭಾರತಕ್ಕೆ ತರಲು ನಿರ್ಧರಿಸಿದೆ.
5ಜಿ ನೆಟ್ವರ್ಕ್ ವ್ಯವಸ್ಥೆಯನ್ನು ಭಾರತಕ್ಕೆ ತರುವುದಕ್ಕಾಗಿ ಅದು ಏರ್ಟೆಲ್ ಮತ್ತು ಬಿಎಸ್ಎನ್ಎಲ್ನೊಂದಿಗೆ ಕೈಜೋಡಿಸಿದೆ. ಈಗಾಗಲೇ ತಿಳುವಳಿಕೆಯ ನಿವೇದನೆ( ಮೆಮೊರಾಡಂ ಆಫ್ ಅಂಡರ್ಸ್ಟ್ಯಾಂಡಿಗ್)ಗೆ ಇವುಗಳು ಸಹಿ ಹಾಕಿವೆ.
5ಜಿ ತಂತ್ರಜ್ಞಾನದ ಗುಣಮಟ್ಟ ಮತ್ತು ಅದಕ್ಕೆ ಸಂಬಂಧಪಟ್ಟ ಡಿವೈಸ್ಗಳ ಆಡಳಿತವ್ಯವಸ್ಥೆಯ ಮೇಲೆ ಕಾರ್ಯನಿರ್ವಹಿಸುವುದಕ್ಕಾಗಿ ತನ್ನ ತಂತ್ರಜ್ಞಾನ ಸಹಯೋಗ ಪಾಲುದಾರಿಕೆಯನ್ನು ವಿಸ್ತರಿಸುವುದಾಗಿ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ನಲ್ಲಿ ನೋಕಿಯಾ ಹೇಳಿಕೊಂಡಿದೆ.
2019-20ರ ವೇಳೆಗೆ 5ಜಿ ನೆಟ್ ಸಂಪರ್ಕ ಭಾರತಕ್ಕೆ ಲಗ್ಗೆ ಇಡಲಿದೆ. 5ಜಿ ಭಾರತದ ಸ್ಮಾರ್ಟ್ ಸಿಟಿ ವಿಷಯಕ್ಕೆ ಬಹಳ ಪ್ರಯೋಜನಕಾರಿ ಎಂದು ಬಿಎಸ್ಎನ್ಎಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.