ಲಕ್ನೋ: ತನ್ನ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಇದೀಗ ಅಪರಾಧಗಳನ್ನು ತಡೆಯಲು ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
ಆಸಿಡ್ ಮಾರಾಟ ಮತ್ತು ಸಂಗ್ರಹಕ್ಕೆ ಇರುವ ಕಾನೂನು ನಿಯಮಗಳು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ಎಲ್ಲಾ ಜಿಲ್ಲಾಡಳಿತಗಳಿಗೂ ಆದೇಶಿಸಿದ್ದಾರೆ. ಈ ಮೂಲಕ ಆಸಿಡ್ ಅಟ್ಯಾಕ್ ತಡೆಯಲು ಅವರು ಮುಂದಾಗಿದ್ದಾರೆ.
ಪ್ರಸ್ತುತ ಉತ್ತರಪ್ರದೇಶದಲ್ಲಿ ‘ಯುಪಿ ಪಾಯಿಸನ್(ಇಟ್ಟುಕೊಳ್ಳುವುದು ಮತ್ತು ಮಾರಾಟ) ನಿಯಮ 2014ರಡಿ ಆಸಿಡ್ ಸಂಗ್ರಹ ಮತ್ತು ಮಾರಾಟ ಮಾಡಲಾಗುತ್ತದೆ. ಆದರೂ ಎಗ್ಗಿಲ್ಲದಂತೆ ಆಸಿಡ್ ಮಾರಾಟ ಮಾಡಲಾಗುತ್ತಿದ್ದು, ಪದೇ ಪದೇ ಆಸಿಡ್ ದಾಳಿಗಳೂ ನಡೆಯುತ್ತಿವೆ.
ಇದೀಗ ಜಿಲ್ಲಾಡಳಿತಗಳಿಗೆ ಯೋಗಿ ಸರ್ಕಾರ ಸುತ್ತೋಲೆ ಕಳುಹಿಸಿದ್ದು, ಎಲ್ಲಾ ಆಸಿಡ್ ವ್ಯಾಪಾರಿಗಳು 15 ದಿನಗಳೊಳಗೆ ತಮ್ಮ ಆಸಿಡ್ ಸಂಗ್ರಹಾ ವರದಿಗಳನ್ನು ಸಬ್-ಡಿವಿಜನಲ್ ಮ್ಯಾಜಿಸ್ಟ್ರೇಟ್ಗಳಿಗೆ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಒಮದು ವೇಳೆ ವರದಿಯಲ್ಲಿ ತಪ್ಪು ಕಂಡು ಬಂದರೆ ಅವರ ಎಲ್ಲಾ ಆಸಿಡ್ಗಳನ್ನು ವಶಪಡಿಸಿಕೊಂಡು, 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.