ನವದೆಹಲಿ: ಡಿಜಿಟಲ್ ಪೇಮೆಂಟ್ಗಳನ್ನು ಜನಪ್ರಿಯಗೊಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಲಕ್ಕಿ ಗ್ರಾಹಕ್ ಯೋಜನೆಯಡಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೊಬ್ಬರು 1.ಕೋಟಿ ರೂಪಾಯಿಯನ್ನು ಗೆದ್ದುಕೊಂಡಿದ್ದಾರೆ.
ಡಿಜಿಟಲ್ ಪೇಮೆಂಟ್ ಪ್ರೊಮೊಷನ್ ಸ್ಕೀಮ್ನ 100ನೇ ಡ್ರಾದಲ್ಲಿ ಅದೃಷ್ಟಶಾಲಿ ವಿಜೇತರ ಹೆಸರನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಅವರು ರಾಷ್ಟ್ರಪತಿ ಭವನದಲ್ಲಿ ಆರಿಸಿದರು.
ಲಕ್ಕಿ ಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರ್ ಯೋಜನೆಯ 3 ಗ್ರಾಹಕರು ಮತ್ತು 3 ವ್ಯಾಪಾರಿಗಳು ವಿಜೇತರಾಗಿದ್ದಾರೆ. ಇವರಿಗೆ ರಾಷ್ಟ್ರಪತಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
1,590ರೂಪಾಯಿಯ ಟ್ರಾನ್ಸಾಕ್ಷನ್ ಮಾಡಿದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕನಿಗೆ ಒಂದು ಕೋಟಿ ಬಂಪರ್ ಹೊಡೆದಿದೆ. ಬ್ಯಾಂಕ್ ಆಫ್ ಬರೋಡ ಗ್ರಾಹನಿಗೆ 50 ಲಕ್ಷ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹನಿಗೆ 25 ಲಕ್ಷ ದೊರೆತಿದೆ. ಇವರೆಲ್ಲಾ ತಮ್ಮ ರುಪಿಪೇ ಡೆಬಿಟ್ ಕಾಡ್ನಲ್ಲಿ ಟ್ರಾನ್ಸಾಕ್ಷನ್ ಮಾಡಿದ್ದರು.
3ವ್ಯಾಪಾರಿಗಳು ತಲಾ 50 ಲಕ್ಷ, 25 ಲಕ್ಷ ಮತ್ತು 12 ಲಕ್ಷ ಜಯಿಸಿದ್ದಾರೆ.
ಇವರೆಲ್ಲರನ್ನೂ ಪ್ರಧಾನಿ ನರೇಂದ್ರ ಮೊದಿ ಎಪ್ರಿಲ್ 14ರ ಅಂಬೇಡ್ಕರ್ ಜಯಂತಿಯಂದು ನಾಗ್ಪುರದಲ್ಲಿ ಸನ್ಮಾನಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.