ನವದೆಹಲಿ: ಮತಯಂತ್ರದ ವಿರುದ್ಧ ದೋಷಾರೋಪ ಮಾಡುತ್ತಿರುವವರ ವಿರುದ್ಧ ಚುನಾವಣಾ ಆಯೋಗ ಮತ್ತೊಮ್ಮೆ ಕಿಡಿಕಾರಿದ್ದು, ಮತಂತ್ರ ದೃಢ ಮತ್ತು ಟ್ಯಾಂಪರ್ ಪ್ರೂಫ್ ಆಗಿದ್ದು, ಅದರ ತಯಾರಕರೂ ಕೂಡ ಅದಕ್ಕೆ ತಿದ್ದುಪಡಿಯನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತಯಂತ್ರದ ವಿಶ್ವಾಸಾರ್ಹತೆಯ ಬಗ್ಗೆ ಪ್ರತಿಪಕ್ಷಗಳು ಎತ್ತುತ್ತಿರುವ ಪ್ರಶ್ನೆಗೆ ಉತ್ತರ ನೀಡಿರುವ ಚುನಾವಣಾ ಆಯೋಗ, ಮತಯಂತ್ರವನ್ನು ಸಮರ್ಥಿಸುವ ಎರಡು ಹೇಳಿಕೆಗಳನ್ನು ಬಿಡುಗಡೆಗೊಳಿಸಿದೆ.
ಇದು ಮತಯಂತ್ರದ ವಿರುದ್ಧದ ಆರೋಪಕ್ಕೆ ಕೌಂಟರ್ ಕೊಡಲು ಚುನಾವಣಾ ಆಯೋಗ ಮಾಡುತ್ತಿರುವ ಮೂರನೇ ಪ್ರಯತ್ನವಾಗಿದೆ.
2006ರವರೆಗೆ ಮತಯಂತ್ರವನ್ನು ತಯಾರಿಸಲಾಗಿದೆ, 2012ರವರೆಗೆ ಇದಕ್ಕೆ ಹೆಚ್ಚುವರಿ ಸುರಕ್ಷತಾ ಫೀಚರ್ಗಳನ್ನು ಅಳವಡಿಸಲಾಗಿದೆ. ಹ್ಯಾಕ್ ಮಾಡಲು ಸಾಧ್ಯವಿಲ್ಲದಂತೆ ತಂತ್ರಜ್ಞಾನಗಳನ್ನು ಇಲ್ಲಿ ಬಳಕೆ ಮಾಡಲಾಗಿದೆ ಎಂದು ಆಯೋಗ ಹೇಳಿದೆ.
ಇದು ಕಂಪ್ಯೂಟರ್ ನಿಯಂತ್ರಿತ ಅಲ್ಲ, ಇಂಟರ್ನೆಟ್ ಅಥವಾ ಇನ್ನಿತರ ಯಾವುದೇ ನೆಟ್ವರ್ಕ್ಗೆ ಇದು ಸಂಪರ್ಕಿಸುವುದಿಲ್ಲ. ರಿಮೋಟ್ ಡಿವೈಸ್ನಿಂದ ಇದನ್ನು ಹ್ಯಾಕ್ ಮಾಡಲೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
2006ರಲ್ಲಿ ಇದನ್ನು ತಯಾರು ಮಾಡುವುದರಿಂದ ಸ್ವತಃ ತಯಾರಕರಿಗೆಯೇ ಭವಿಷ್ಯದಲ್ಲಿ ಯಾವ ಅಭ್ಯರ್ಥಿಗಳು, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬುದು ತಿಳಿದಿರುವುದಿಲ್ಲ ಹೀಗಾಗೀ ತಿದ್ದುಪಡಿ ಸಾಧ್ಯವೇ ಇಲ್ಲ ಎಂದು ಆಯೋಗ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.