ದೆಹಲಿ: ಭಾರತದಲ್ಲಿ ಮದುವೆ ಎನ್ನುವುದು ಅತೀದೊಡ್ಡ ಸಂಭ್ರಮ ಮತ್ತು ಸಮಾರಂಭ. ಕೆಲವು ಕುಟುಂಬಗಳು ಮದುವೆಯ ಬಳಿಕ ಸಾಲದಲ್ಲಿ ಬೀಳುತ್ತಿವೆ. ಇದಕ್ಕೆ ಕಾರಣ ನಮ್ಮ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಾದ ಮದುವೆ ಖರ್ಚುವೆಚ್ಚ.
ದೆಹಲಿ ಮೂಲದ ಎನ್ಜಿಓ ಗೂಂಜ್ ಅತೀ ಕಡಿಮೆ ಖರ್ಚಿನಲ್ಲಿ ಎಲ್ಲವನ್ನೂ ಖರೀದಿಸಿ ಮದುವೆ ನಡೆಯುವಂತೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ನಗರಗಳಿಂದ ಬಳಕೆಯಾದ ಮದುವೆ ಧಿರಿಸುಗಳನ್ನು ತಂದು ಅದಕ್ಕೆ ಹೊಸ ರೂಪ ಕೊಟ್ಟು ಗ್ರಾಮೀಣ ಭಾಗಗಳಿಗೆ ಪಂಚಾಯತ್ಗಳ ಮೂಲಕ ಹಂಚಿಕೆ ಮಾಡುತ್ತಿದೆ.
ಇದೀಗ ಅದು ಧಾರ್ಮಿಕ ಸಮಾರಂಭಗಳಲ್ಲಿ ಬಳಕೆಯಾಗುವ ‘ಮಾತಾ ಕೀ ಚುನ್ನಿ’ಯನ್ನು ಸಂಗ್ರಹಿಸಿದ ಅದರಲ್ಲಿ ಲೆಹೆಂಗಾಗಳನ್ನು ಮಾಡಿ, ಬಡ ಮದುಮಕ್ಕಳಿಗೆ ಹಂಚುತ್ತಿದೆ. ಧಾರ್ಮಿಕ ಸಮಾರಂಭದ ವೇಳೆ ತಲೆಗೆ ಅಥವಾ ಕೈಗೆ ಕಟ್ಟಲಾಗುವ ದೇವರ ನಾಮಗಳನ್ನು ಬರೆದಿರುವ ‘ಮಾತಾ ಕೀ ಚುನ್ನಿ’ಯನ್ನು ಬಳಸಿದ ಬಳಿಕ ಮರಗಳಿಗೆ ನೇತಾಡಿಸುತ್ತಾರೆ ಅಥವಾ ನೀರಿನಲ್ಲಿ ಬಿಡುತ್ತಾರೆ. ಆದರೆ ಗೂಂಜ್ ಈ ಚುನ್ನಿಗಳನ್ನು ಆ ರೀತಿ ಮಾಡದೆ ತಮಗೆ ತಂದು ಕೊಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದೆ.
ಪಾದರಕ್ಷೆ, ಮೇಕ್ ಅಪ್ ಸೆಟ್, ಆಭರಣ, ಪರ್ಸ್ಗಳನ್ನೂ ಅತೀ ಕಡಿಮೆ ದರ ಲಭ್ಯವಿರುವಂತೆ ತಯಾರಿಸಿ ಮದುಮಕ್ಕಳಿಗೆ ನೀಡುತ್ತಿದೆ. ಬಡವರನ್ನು ಗುರುತಿಸಿ ಬಳಿಕವಷ್ಟೇ ಇದನ್ನು ಅವರಿಗೆ ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.