News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 12th October 2024


×
Home About Us Advertise With s Contact Us

ಶಾಲಾ ಕಾಮಗಾರಿ ಸ್ಥಗಿತ: ಪರದಾಡುತ್ತಿರುವ ವಿದ್ದಾರ್ಥಿಗಳು

ಬೆಳ್ತಂಗಡಿ: ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳ ಕೊರತೆಯಿಂದ ಮುಚ್ಚುವ ಸ್ಧಿತಿಯಾದರೆ, ಬೆಳ್ತಂಗಡಿ ತಲೂಕಿನ ಸರಳೀಕಟ್ಟೆಯ ಪ್ರಾಧಮಿಕ ಹಾಗೂ ಪ್ರೌಢಶಲೆಗಳ ಸ್ಧಿತಿ ಮಾತ್ರ ಭಿನ್ನವಾಗಿದೆ.

DSCSchool
ಇಲ್ಲಿಗೆ ಪ್ರೌಢಶಾಲೆ ಮಂಜೂರಾಗಿ ವರ್ಷಗಳೇ ಕಳೆದರು, ಇನ್ನೂ ಕಟ್ಟಡ ಕಾಮಗಾರಿ ಆರಂಭವಗಿಲ್ಲ. ಪ್ರಾಥಮಿಕ ಶಾಲೆಯಲ್ಲಿಯೇ ಪ್ರೌಢಶಾಲೆಯೂ ನಡೆಯುತ್ತಿದ್ದು, ತರಗತಿ ಕೊಠಡಿಗಳ ಕೊರತೆಯಿಂದಾಗಿ ಎರಡೆರಡು ತರಗತಿಗಳ ಮಕ್ಕಳು ಒಂದೇ ಕೋಣೆಯಲ್ಲಿ ಕುಳಿತು ಪಾಠ ಕೇಳಬೇಕಾದ ಸ್ಧಿತಿಯಿದೆ. ಎರಡೂ ಶಾಲೆಗಳ ವಿಧ್ಯಾರ್ಥಿಗಳು, ಶಿಕ್ಷಕರು ಸ್ಧಳದ ಅಭಾವದಿಂದ ಪರದಾಡುವಂತಾಗಿದೆ. ಶಾಲೆಗೆ ಸೇರಲು ಬರುವ ಮಕ್ಕಳನ್ನು ಹಿಂದಕ್ಕೆ ಕಳುಹಿಸಬೇಕಾದ ಸ್ಧಿತಿ ಇಲ್ಲಿನದ್ದಾಗಿದೆ.
ಸರಳೀಕಟ್ಟೆಯಲ್ಲಿ ಪ್ರೌಢಶಾಲೆಗಾಗಿನ ಹೋರಾಟ ಇಂದು ನಿನ್ನೆಯದ್ದಲ್ಲ. ಜನರ ಹೋರಾಟದ ಫಲವಾಗಿ, ಶಾಸಕರ ಹಾಗೂ ಇತರ ಜನಪ್ರತಿನಿಧಿಗಳ ಪ್ರಯತ್ನದಿಂದ 2010-11ರಲ್ಲಿ ರಾಷ್ಟ್ರ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯ ಅಡಿಯಲ್ಲಿ ಇಲ್ಲಿಗೆ ಪ್ರೌಢ ಶಾಲೆ ಮಂಜೂರಾಗಿತು.

ಗ್ರಾಮದ ದೊಡ್ಡಕಲ್ಲು ಎಂಬಲ್ಲಿ ಶಾಲೆಗಾಗಿ ಜಮೀನು ಗುರುತಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ 77 ಲಕ್ಷ ಅನುದನವೂ ಮಂಜೂರಗಿತ್ತು. ಅದರಂತೆ ಟೆಂಡರ್ ಪ್ರಕ್ರಿಯೆ ನಡೆದು ಕೆ. ಬಿ. ಕೆ. ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪೆನಿಯವರಿಗೆ ಟೆಂಡರ್ ಆಗಿತ್ತು. ಆದರೆ ಕಾಮಗಾರಿ ಮಾತ್ರ ಆರಂಭಗೊಂಡಿರಲಿಲ್ಲ. ಆ ಬಗ್ಗೆ ಯಾರಿಗೆ ಕೇಳಿದರೂ ಮಾಹಿತಿಯೇ ನೀಡುತ್ತಿರಲಿಲ್ಲ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರು.

ಕಾಮಗಾರಿ ನಡೆಯದ ಹಿನ್ನಲೆಯಲ್ಲಿ ಬಳಿಕ ಕಟ್ಟಡದ ಅಂದಾಜು ಪಟ್ಟಿಯನ್ನು ಪುನರ್ ತಯಾರಿಸಲಾಗಿದ್ದು 1.25ಕೋಟಿಯಾಗಿ ಪುನರ್ ರಚಿಸಲಾಗಿದೆ. ಟೆಂಡರ್ ವಹಿಸಿದವರು ಅದನ್ನು ಬೇರೆ ಯಾರಿಗೋ ವಹಿಸಿದ್ದು, ಆದರೆ ಅವರು ಕಾಮಗಾರಿಯೆಡೆಗೆ ಆಸಕ್ತಿ ತೋರಿಸುತ್ತಿಲ್ಲ. ಆರಂಭದಲ್ಲಿ ಶಾಲೆಗೆ ಮಂಜೂರಾಗಿದ್ದ ಜಮೀನಿನ ದಾಖಲೆಗಳು ಸರಿಯಾಗಿರಲಿಲ್ಲ ಎಂಬ ಕಾರಣ ನೀಡಲಾಗುತ್ತಿತ್ತು. ಬಳಿಕ ಸಮಿತಿಯವರೇ ಕಚೇರಿಗಳಿಗೆ ಅಲೆದು ದಾಖಲೆಗಳನ್ನು ಸರಿಪಡಿಸಿದ್ದಾರೆ.

ಇದೀಗ ಶಾಲೆಯ ಹೆಸರಿಗೆ 4ಎಕರೆ, 45 ಸೆನ್ಸ್ ಜಮೀನು ಇದೆ. ದಾಖಲೆಗಳು ಸರಿಯಾದ ಬಳಿಕ 2013 ರಲ್ಲಿ ಶಾಸಕ ವಸಂತ ಬಂಗೇರ ಅವರು ಶಲೆಯ ಕಟ್ಟಡದ ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದರು. ಆಗ ಒಂದೆರಡು ದಿನ ಮಾತ್ರ ಕೆಲಸ ನಡೆಡಿದೆ.

ಒಂದಿಷ್ಟು ಜಾಗ ಸಮತಟ್ಟು ಮಾಡಿ ಪಿಲ್ಲರ್ ಹಾಕಲು ಹೊಂಡಗಳನ್ನು ತೆಗೆಯಲಾಗಿದೆ. ಅಲ್ಲಿಗೆ ಕಾಮಗಾರಿ ಸ್ಧಗಿತಗೊಂಡಿದೆ. ಶಾಲಾಭಿವೃದ್ಧಿ ಸಮಿತಿಯವರು ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಇಂಜಿಯರ್ ಅವರಲ್ಲಿ ಈ ಬಗ್ಗೆ ವಿಚಾರಿಸಿದರೆ, ಸಮರ್ಪಕ ಉತ್ತರ ನೀಡುತ್ತಿಲ್ಲ. ಇದೀಗ ಇಲ್ಲಿನ ಜನರು ಶಾಲಾ ಕಟ್ಟಡ ರಚನೆಗಾಗಿ ಹೋರಾಟ ನಡೆಸಲು ಸಮಿತಿಯೊಂದನ್ನು ರಚಿಸಿಕೊಂಡು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಶಾಲೆಗೆ ಮಂಜೂರಾದ ಕಟ್ಟಡ ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಇವರದ್ದಾಗಿದೆ.

ಸರಳೀಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಎಂಟನೆಯ ತರಗತಿಯ ಸುಮಾರು 350 ಮಂದಿ ವಿಧ್ಯಾಥಿಗಳು ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳೇ ಈ ಶಾಲಾ ಕಟ್ಟಡದಲ್ಲಿಲ್ಲ. ಇದೀಗ ಅದರೊಂದಿಗೆ 9 ಮತ್ತು 10ನೇ ತರಗತ್ತಿಯ ವಿಧ್ಯರ್ಥಿಗಳಿಗೂ ಇದೇ ಕಟ್ಟಡ ಆಸರೆಯಾಗಿದೆ. 9ನೇ ತರಗತಿಯಲ್ಲಿ ಈ ವರ್ಷ 80 ಮಂದಿ ಮಕ್ಕಳಿದ್ದಾರೆ 10ನೇ ತರಗತಿಯಲ್ಲಿ 53 ಮಂದಿ ವಿಧ್ಯಾರ್ಧಿಗಳಿದ್ದಾರೆ. ಮುಂದಿನ ವರ್ಷ8 ನೇ ತರಗತಿಗೆ ನೂರಕ್ಕೂ ಹೆಚ್ಚು ಮಕ್ಕಳು ಬರುವ ನಿರೀಕ್ಷೆಯಿದೆ ಅದರೆ ಅವರಿಗೆ ಸ್ಧಳಾವಕಾಶ ಕಲ್ಪಿಸುವುದೇ ಸಮಸ್ಯೆಯಾಗಿದೆ ಎನ್ನುತಾರೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು.

ಇದೀಗ ಕಟ್ಟಡದ ಕಾಮಗಾರಿ ನಡೆಯುವ ಸ್ಧಳದಲ್ಲಿ ಕೋಳವೆ ಬವಿಯನ್ನು ನಿರ್ಮಿಸಲಾಗಿದ್ದು ನೀರಿನ ಸಮಸ್ಯೆಯು ನಿವಾರಣೆಯಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದು ಅದನ್ನು ಆರಂಭಿಸಿ ಅರ್ಧದಲ್ಲಿಯೆ ಕೈ ಬಿಟ್ಟಿರುವ ಕಂಪೆನಿಯ ವಿರುದ್ಧ ಅಗತ್ಯ ಕನೂನು ಕ್ರಮ ಕೈಗೊಂಡು ಅವರು ಕಾಮಗಾರಿಯನ್ನು ಕೂಡಲೆ ಅರಂಭಿಸುವಂತೆ ಮಾಡಬೇಕು. ಇಲ್ಲವಾದಲ್ಲಿ ಗುತ್ತಿಗೆಯನ್ನು ಬೆರೆ ಯಾರಿಗಾದರೂ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ ಗ್ರಾಮಸ್ಧರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top