ನಂಜನಗೂಡು: ಇಂದು ನಡೆದ ಗೌತಮ ಪಂಚ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿದ್ದು, ಲಕ್ಷಾಂತರ ಭಕ್ತರು ಇದಕ್ಕೆ ಸಾಕ್ಷಿಯಾದರು.
5 ರಥಗಳನ್ನು ಎಳೆಯುವ ಏಕೈಕ ಕ್ಷೇತ್ರ ಎನಿಸಿದೆ ನಂಜನಗೂಡು. ಧಾರ್ಮಿಕ ವಿಧಿ ವಿಧಾನಗಳ ನಂತರ, ಜಿಲ್ಲಾಧಿಕಾರಿ ರಂದೀಪ್ ಅವರು ರಥದ ಚಕ್ರಕ್ಕೆ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಜೈ ಶ್ರೀಕಂಠ, ಜೈ ನಂಜುಂಡ, ಹರ ಹರ ಮಹಾದೇವ ಎಂಬ ಘೋಷಣೆಗಳೊಂದಿಗೆ ರಥಕ್ಕೆ ಎರಡೂ ಬದಿಯಲ್ಲಿ ಕಟ್ಟಿದ ಭಾರಿ ಗಾತ್ರದ ಹಗ್ಗಗಳನ್ನು ಹಿಡಿದು ರಥ ಎಳೆದರು. ಇದಲ್ಲದೇ ಗಣಪತಿ ರಥದ ನಂತರ ಗೌತಮ ರಥ ಪಾರ್ವತಿ ಅಮ್ಮನವರ ರಥ, ಸುಬ್ರಹ್ಮಣ್ಯ ರಥ ಮತ್ತು ಚಂಡಿಕೇಶ್ವರ ರಥಗಳನ್ನು ಎಳೆಯಲಾಯಿತು. ನವದಂಪತಿಗಳು ಹಾಗೂ ಅಸಂಖ್ಯ ಭಕ್ತರು ರಥಕ್ಕೆ ಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಸನ್ನಿವೇಶ ಸಾಮಾನ್ಯವಾಗಿತ್ತು.
ಜಿಲ್ಲಾಧಿಕಾರಿ ರಂದೀಪ್, ದೇವಸ್ಥಾನದ ಇ.ಒ.ಜಯಪ್ರಕಾಶ್, ಎ.ಇ.ಒ.ಗಂಗಯ್ಯ, ನಗರಸಭಾ ಆಯುಕ್ತ ವಿಜಯ್, ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ನಗರಸಭೆ, ಗ್ರಾಮ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯರು ಇತರರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.