ನವದೆಹಲಿ: ದಂಗಾಲ್ ಸಿನಿಮಾದಲ್ಲಿನ ಭಾರತೀಯ ಧ್ವಜ ಮತ್ತು ರಾಷ್ಟ್ರ ಗೀತೆಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪಾಕಿಸ್ಥಾನ ಸೆನ್ಸಾರ್ ಬೋರ್ಡ್ ಬೇಡಿಕೆಯಿಟ್ಟ ಹಿನ್ನಲೆಯಲ್ಲಿ ತನ್ನ ಈ ಸಿನಿಮಾವನ್ನು ಪಾಕ್ನಲ್ಲಿ ರಿಲೀಸ್ ಮಾಡದಿರಲು ಬಾಲಿವುಡ್ ನಟ ಅಮೀರ್ ಖಾನ್ ನಿರ್ಧರಿಸಿದ್ದಾರೆ.
ಸಿನಿಮಾದಲ್ಲಿನ ಎರಡು ದೃಶ್ಯಗಳನ್ನು ಕಟ್ ಮಾಡಿ ಬಳಿಕ ಪಾಕಿಸ್ಥಾನದಲ್ಲಿ ರಿಲೀಸ್ಗೆ ಸಮ್ಮತಿಸಲು ಪಾಕಿಸ್ಥಾನದ ಸೆನ್ಸಾರ್ ಮಂಡಳಿ ನಿರ್ಧರಿಸಿದೆ ಎಂದು ಮಂಡಳಿ ಮುಖ್ಯಸ್ಥ ಮೊಬಶೀರ್ ಹಸನ್ ತಿಳಿಸಿದ್ದಾರೆ.
ಆದರೆ ಆ ಎರಡು ದೃಶ್ಯಗಳು ಸಿನಿಮಾದ ಸ್ಫೂರ್ತಿಯಾಗಿದ್ದು, ಅದನ್ನು ಕಟ್ ಮಾಡಲು ಸಾಧ್ಯವಿಲ್ಲ ಎಂದು ಅಮೀರ್ ಖಾನ್ ತಿಳಿಸಿದ್ದಾರೆ. ಅಲ್ಲದೇ ಪಾಕ್ನಲ್ಲಿ ಈ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದಾರೆ.
2016ರ ಉರಿ ದಾಳಿ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಪಾಕ್ ಭಾರತೀಯ ಸಿನಿಮಾಗೆ ನಿಷೇಧ ಹೇರಿತ್ತು. ಇತ್ತೀಚಿಗಷ್ಟೇ ನಿಷೇಧವನ್ನು ಹಿಂಪಡೆದುಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.