ಬೊಂಡಿಲ್ಲಾ: ಧಾರ್ಮಿಕ ಸೌಹಾರ್ದತೆ ಮತ್ತು ಸಹಿಷ್ಣುತೆಯನ್ನು ಎತ್ತಿಹಿಡಿಯಲು ಭಾರತದ ಅತ್ಯುತ್ತಮ ರಾಷ್ಟ್ರ ಎಂದು ಟಿಬೆಟಿಯನ್ ಧರ್ಮಗುರು ದಲೈಲಾಮ ಅಭಿಪ್ರಾಯಪಟ್ಟಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಮಾತನಾಡಿದ ಅವರು, ’ಜವಾಬ್ದಾರಿಯ ಪ್ರಜ್ಞೆ ಕುಂಠಿತವಾಗುತ್ತಿರುವ ಈ ಸಂದರ್ಭದಲ್ಲಿ ಧಾರ್ಮಿಕ ಸೌಹಾರ್ದತೆ ಅತ್ಯವಶ್ಯಕವಾಗಿದೆ. ಕೆಲವೊಂದು ಅಡೆತಡೆಗಳಿದ್ದರೂ ಅತೀ ಜನಸಂಖ್ಯೆಯುಳ್ಳ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮಾತ್ರ ಇದು ಸಾಧ್ಯ. ಸಾವಿರಾರು ವರ್ಷಗಳಿಂದ ಈ ರಾಷ್ಟ್ರ ದಾರಿ ತೋರಿಸುತ್ತಾ ಬಂದಿದೆ’ ಎಂದರು.
ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳು ಭಾರತದಲ್ಲೇ ಪ್ರವರ್ಧಮಾನಕ್ಕೆ ಬಂದಿದೆ ಎಂದರು.
‘ನಾವು ಸಾಮಾಜಿಕ ಪ್ರಾಣಿಗಳು, ಪರಸ್ಪರ ಸಹಾನುಭೂತಿ ಇಲ್ಲದೆ ನಾವು ಸಂತೋಷದಿಂದಿರಲು ಸಾಧ್ಯವಿಲ್ಲ. ನಾವು ಆಸ್ತಿಕರೋ ಅಥವಾ ನಾಸ್ತಿಕರೋ ಒಟ್ಟಿನಲ್ಲಿಸ ಜಗತ್ತಲ್ಲಿ ಪ್ರೀತಿ ಮತ್ತು ಸಹಾನುಭೂತಿಯ ಅವಶ್ಯಕತೆ ಇದೆ’ ಎಂದಿದ್ದಾರೆ.
‘ಮುಸ್ಲಿಂ ಭಯೋತ್ಪಾದಕರ, ಬೌದ್ಧ ಭಯೋತ್ಪಾದಕರ ಬಗ್ಗೆ ನಾವು ಕೇಳುತ್ತೇವೆ. ಆದರೆ ಭಯೋತ್ಪಾದನೆಯಲ್ಲಿ ತೊಡಗಿಕೊಂಡ ತಕ್ಷಣ ಅವರು ಮುಸ್ಲಿಂ ಅಥವಾ ಬೌದ್ಧರಾಗಿ ಖಂಡಿತ ಉಳಿಯೋದಿಲ್ಲ. ಈ ಬಗ್ಗೆ ನಾವು ಯೋಚಿಸಬೇಕು. ಚೀನಾ ಸರ್ಕಾರದವರು ನನ್ನನ್ನೂ ಭಯೋತ್ಪಾದಕನೆಂದೇ ಪರಿಗಣಿಸುತ್ತಾರೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.