ಹೈದರಾಬಾದ್: ಅಂಚೆ ಕಾರ್ಡ್, ವಾಟ್ಸ್ಪ್ ಇತ್ಯಾದಿಗಳ ಮೂಲಕ ತಲಾಖ್ ನೀಡಿರುವ ಕುರಿತು ಸಾಕಷ್ಟು ಸುದ್ದಿಯಾಗಿವೆ. ಆದರೆ ಇದೀಗ ದಿನ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡುವ ಮೂಲಕ ತಲಾಖ್ ನೀಡಿದ್ದಾನೆ ಇಲ್ಲೊಬ್ಬ ಭೂಪ.
ಹೈದರಾಬಾದ್ ಮೂಲದ ಮೊಹ್ಮದ್ ಮುಸ್ತಾಕುದ್ದೀನ್ ಎಂಬ ವ್ಯಕ್ತಿಯೇ ತನ್ನ ಪತ್ನಿಗೆ ಸ್ಥಳಿಯ ಉರ್ದು ಪತ್ರಿಕೆಯಲ್ಲಿ ತಲಾಖ್ ಕುರಿತು ಜಾಹೀರಾತು ನೀಡಿದ್ದು, ಪೊಲೀಸರು ಅವನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
2015 ರಲ್ಲಿ ಮದುವೆಯಾಗಿದ್ದ ಮೊಹ್ಮದ್, ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದ. ಪತ್ನಿಯನ್ನೂ ಸೌದಿ ಅರೇಬಿಯಾಕ್ಕೆ ಕರೆದುಕೊಂಡು ಹೋಗಿದ್ದ. ಕೆಲ ವರ್ಷಗಳ ನಂತರ ಹೈದರಾಬಾದ್ಗೆ ಆಗಮಿಸಿದ್ದರು. ಮರಳಿ ಹೋಗುವಾಗ ಪತ್ನಿಯನ್ನು ಇಲ್ಲೇ ಬಿಟ್ಟು ಹೋಗಿದ್ದ.
ಈ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ತಲಾಖ್ ನೀಡಿರುವ ಜಾಹೀರಾತನ್ನು ಆ ಮಹಿಳೆ ಕಂಡಿದ್ದಾಳೆ. ನಂತರ ಅನೇಕ ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ದಾರಿಕಾಣದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.
ದಿನಪತ್ರಿಕೆಯಲ್ಲಿ ಜಾಹೀರಾತು ಕೊಡುವ ಮೂಲಕ ತಲಾಖ್ ನೀಡಬಹುದೇ ? ಇದಕ್ಕೆ ಶರೀಯತ್ ಕಾನೂನಿನಲ್ಲಿ ಅವಕಾಶವಿದೆಯೇ ಎಂಬಿತ್ಯಾದಿ ಅಂಶಗಳ ಕುರಿತು ತನಿಖೆ ನಡೆದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.