ನ್ಯೂಯಾರ್ಕ್: 10ನೇ ಶತಮಾನಕ್ಕೆ ಸೇರಿದ ಹನುಮಂತನ ವಿಗ್ರಹವನ್ನು ಅಮೆರಿಕಾ ವಸ್ತು ಸಂಗ್ರಹಾಲಯ ಕ್ಯಾಂಬೋಂಡಿಯಾಕ್ಕೆ ಮರಳಿಸಿದೆ. ಈ ವಿಗ್ರವು ಪ್ರಾಚೀನ ದೇವಾಲಯದ ಮುಖ್ಯದ್ವಾರದ ಆವರಣದಿಂದ ತೆಗೆದಿರಬಹುದು ಎಂದು ಸಂಶೋಧಕರು ಅಭಿಪ್ರಾಯಿಸಿದ್ದಾರೆ.
1982ರಲ್ಲಿ ನ್ಯೂಯಾರ್ಕ್ನ ಕಲಾ ವ್ಯಾಪಾರಿಯ ಬಳಿಯಿಂದ ಈ ವಿಗ್ರವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು ಎಂದು ಕ್ಲೆವೆಲ್ಯಾಂಡ್ ಮ್ಯುಸಿಯಮ್ ಆಫ್ ಆರ್ಟ್ ಹೇಳಿದೆ. ಅಲ್ಲದೇ ಇದನ್ನು ಸ್ವಯಂಪ್ರೇರಣೆಯಿಂದ ಕಾಂಬೊಡಿಯಾಗೆ ಮರಳಿಸುತ್ತಿರುವುದಾಗಿ ತಿಳಿಸಿದೆ.
ವಿಗ್ರಹ ಹಸ್ತಾಂತರದ ವೇಳೆ ಬ್ಯಾಲೆ ನೃತ್ಯಗಾರರು ಶುಭ ಸೂಚಕವಾಗಿ ಪುಷ್ಪಗಳ ಮಳೆಗೆರೆದರು. ವಿಗ್ರಹಕ್ಕೆ ಅಧಿಕಾರಿಗಳು ಹೂವಿನ ಮಾಲೆ ಹಾಕಿದರು. ಈ ವೇಳೆ ಕಾಂಬೋಡಿಯನ್ ಉಪಪ್ರಧಾನಿ ಸಾಕ್ ಅನ್ ಮತ್ತು ಹಲವು ಸಚಿವರುಗಳು ಹಾಜರಿದ್ದರು.
ಕ್ಲೆವೆಲ್ಯಾಂಡ್ ಮ್ಯುಸಿಯಮ್ ಆಫ್ ಆರ್ಟ್ನ ನಿರ್ದೇಶಕರಿಂದ ವಿಗ್ರಹದ ಹಸ್ತಾಂತರ ಪತ್ರವನ್ನು ಪಡೆದು ಮಾತನಾಡಿದ ಸೋಕ್ ಅನ್ ‘ಹನುಮಂತ ಈಗ ಬದುಕಿದ್ದರೆ ಆತನ ಮಖದಲ್ಲಿ ತನ್ನವರನ್ನು ಸೇರಿದ ಸಂತೋಷದ ಮಂದಹಾಸ ಕಾಣುತ್ತಿತ್ತು’ ಎಂದರು.
ಸಂಶೋಧಕರ ಪ್ರಕಾರ ಈ ಮೂರ್ತಿಯ ತಲೆ ಮತ್ತು ದೇಹವನ್ನು ಥೈಲ್ಯಾಂಡ್ನಲ್ಲಿ 1968ಮತ್ತು 1972 ಮಾರಾಟಕ್ಕೆ ಇಡಲಾಗಿತ್ತು. ಪ್ರಸತ್ ಚೆನ್ ದೇಗುಲ ಆವರಣದ ಪೂರ್ವ ದ್ವಾರದಿಂದ ಈ ವಿಗ್ರವನ್ನು ತೆಗೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.