ನವದೆಹಲಿ: ತ್ರಿವಳಿ ತಲಾಖ್ನ್ನು ನಿಷೇಧಿಸಬೇಕು ಎಂಬ ಹೋರಾಟಕ್ಕೆ ಇದೀಗ ಆಲ್ ಇಂಡಿಯಾ ಶಿಯಾ ಪಸರ್ನಲ್ ಲಾ ಬೋರ್ಡ್ ಕೈಜೋಡಿಸಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿರುವ ಇದು, ರಾಮಜನ್ಮಭೂಮಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಬೇಕು ಎಂದಿದೆ.
ಈ ಸಂಘಟನೆ ಬುಧವಾರ ಒಟ್ಟು 3 ನಿರ್ಣಯಗಳನ್ನು ಅಂಗೀಕರಿಸಿದೆ. ಗೋಹತ್ಯೆ ವಿರುದ್ಧ ಫತ್ವಾ, ತ್ರಿವಳಿ ತಲಾಖ್ ನಿಷೇಧ ಮತ್ತು ಆಯೋಧ್ಯಾ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳುವುದು ಈ ನಿರ್ಣಯಗಳಾಗಿವೆ.
ಇರಾಕ್ನ ಉನ್ನತ ಶಿಯಾ ಧರ್ಮಗುರು ಅಯತುಲ್ಲಹ ಶೇಖ್ ಬಶೀರ್ ಹುಸೇನ್ ನಜಾಫಿ ಅವರ ಸಲಹೆ ಪಡೆದುಕೊಂಡ ಬಳಿಕ ಗೋಹತ್ಯೆ ವಿರುದ್ಧ ಫತ್ವಾವನ್ನು ಇದು ಹೊರಡಿಸಿದೆ.
ಗೋಹತ್ಯೆಯಿಂದ ದೇಶದಲ್ಲಿ ಕೋಮುಗಲಭೆಗಳು ಸಂಭವಿಸುತ್ತಿದೆ ಎಂದು ಇದು ಅಭಿಪ್ರಾಯಪಟ್ಟಿದೆ.
ಅಲ್ಲದೇ ಒಂದು ಕಡೆಯಿಂದ ಹೇಳುವ ತ್ರಿವಳಿ ತಲಾಖ್ ಸ್ವೀಕಾರರ್ಹವಲ್ಲ ಎಂದು ಇದು ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.