ನವದೆಹಲಿ: ಯುಪಿ ಚುನಾವಣೆಯಲ್ಲಿ ಸೋತಿರುವ ಪಕ್ಷಗಳು ಮತಯಂತ್ರದ ವಿರುದ್ಧ ದೋಷಾರೋಪ ಮಾಡುತ್ತಿರುವುದನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು ’ಕೆಲವರು ತಮ್ಮ ಸೋಲಿನ ಹೊಣೆಯನ್ನು ಇವಿಎಂ(ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್) ಮೇಲೆ ಹೊರಿಸುತ್ತಿದ್ದಾರೆ. ಅವರಿಗೆ ಇವಿಎಂ ಅಂದರೆ ’ಎವ್ರಿ ವೋಟ್ ಮೋದಿ’ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಜನರ ಯೋಚನಾ ಶೈಲಿಯಲ್ಲಿ ಬದಲಾವಣೆಯಾಗಿದೆ, ಅವರಿಗೆ ಪ್ರಗತಿ ಬೇಕಾಗಿತ್ತು. ಇದು ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಅವರು ಅರಿತುಕೊಂಡರು. ಹೀಗಾಗಿಯೇ ಕಾಂಗ್ರೆಸ್-ಸಮಾಜವಾದಿ ಮೈತ್ರಿ ಮತ್ತು ಬಹುಜನ ಸಮಾಜವಾದಿ ಉತ್ತರಪ್ರದೇಶದಲ್ಲಿ ಸೋತಿತು ಎಂದರು.
‘’ಜನರಿಗೆ ಉತ್ತಮ ಅವಕಾಶ, ಅರಿವು ಮತ್ತು ಜೀವನ ಮಟ್ಟ ಬೇಕಾಗಿದೆ. ಹೆಚ್ಚಿನ ಅಬ್ಬರದ ಪ್ರಚಾರವಿದ್ದರೂ ಉತ್ತರಪ್ರದೇಶದಲ್ಲಿ ಏನಾಯಿತು ಎಂಬುದು ನಮಗೆ ತಿಳಿದೇ ಇದೆ. ಕೆಲವರು ಇದಕ್ಕೆ ಮತಯಂತ್ರ ಕಾರಣ ಎಂದರು. ಇದೀಗ ಇವಿಎಂ ಅಂದರೆ ‘ಎವ್ರಿ ವೋಟ್ ಮೋದಿ’ ಎಂಬ ಹೊಸ ಆಯಾಮವನ್ನೂ ಅವರು ನೀಡುತ್ತಿದ್ದಾರೆ. ಅಂದರೆ ಯಾವ ಬಟನ್ ಒತ್ತಿದರೂ ವೋಟ್ ನೇರ ಮೋದಿಗೆ ಹೋಗುತ್ತದೆ ಎಂಬಂತೆ ಇವರು ಕಲ್ಪಿಸಿಕೊಂಡಿದ್ದಾರೆ’ ಎಂದಿದ್ದಾರೆ.
ಒಂದು ವೇಳೆ ಮತಯಂತ್ರವನ್ನು ತಿದ್ದುಪಡಿ ಮಾಡಲಾಗಿದೆ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಪಂಜಾಬ್ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಹೇಗೆ ಜಯಿಸಿತು ಎಂಬುದಕ್ಕೆ ಉತ್ತರಕೊಡಲಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.