ಬೋಮ್ಡಿಲಾ : ಭಾರತ ಎಂದಿಗೂ ನನ್ನನ್ನು ಚೀನಾದ ವಿರುದ್ಧ ಬಳಸಿಕೊಂಡಿಲ್ಲ ಎಂಬುದಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ.
ಅರುಣಾಚಲ ಭೇಟಿಯ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚೀನಾ ಟಿಬೆಟ್ ಬೌದ್ಧರ ಅಪಾರ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಹಲವಾರು ಪಂಡಿತರು ನಮ್ಮ ಹೋರಾಟವನ್ನು ಬೆಂಬಲಿಸುತ್ತಾರೆ ಎಂದಿದ್ದಾರೆ.
ಅಲ್ಲದೇ ಚೀನಾಗೆ ಸವಾಲೊಡ್ಡುವ ಸಲುವಾಗಿ ಭಾರತ ದಲೈಲಾಮರನ್ನು ಬಳಸುತ್ತಿದೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಭಾರತ ಎಂದಿಗೂ ಚೀನಾದ ವಿರುದ್ಧ ನನ್ನನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿಮ್ಮನ್ನು ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡಲು ಅವಕಾಶ ಕಲ್ಪಿಸಿದ ಭಾರತದ ವಿರುದ್ಧ ಚೀನಿಯರು ಆಕ್ರೋಶಗೊಂಡಿದ್ದಾರಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ದಯವಿಟ್ಟು ಚೀನಿಯರು ಆಕ್ರೋಶಿತರಾಗಿದ್ದಾರೆ ಎನ್ನಬೇಡಿ, ಚೀನಾದಲ್ಲಿ ಸಾಕಷ್ಟು ಮಂದಿ ಭಾರತವನ್ನು ಪ್ರೀತಿಸುತ್ತಾರೆ. ನನ್ನನ್ನು ದೆವ್ವದಂತೆ ನೋಡುವ ಕೆಲವು ಸಂಕುಚಿತ ಮನಸ್ಥಿತಿಯ ರಾಜಕಾರಣಿಗಳು ಭಾರತವನ್ನು ಭಿನ್ನವಾಗಿ ನೋಡುತ್ತಾರೆ ಎಂದಿದ್ದಾರೆ.
ಚೀನಾ ಮತ್ತು ಟೆಬೆಟ್ ಎರಡರ ಒಳಿತಿಗಾಗಿಯೂ ಚೀನಾ ಟಿಬೆಟ್ಗೆ ಅರ್ಥಪೂರ್ಣ ಸ್ವಾಯತ್ತತೆಯನ್ನು ನೀಡಬೇಕು ಎಂದು ಬೌದ್ಧ ಧರ್ಮಗುರು ದಲೈಲಾಮ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.