×
Home About Us Advertise With s Contact Us

ಸಾಲ ಮನ್ನಾ ಮಾಡಿದ ಯೋಗಿ, ಕೇಂದ್ರ ಮಾಡಲಿ ಎಂದ ಸಿದ್ದರಾಮಯ್ಯ

ಬೆಂಗಳೂರು: ರೈತರ ಸಾಲ ಮನ್ನಾ ಮಾಡುವಲ್ಲಿ ಹಿಂದೇಟು ಹಾಕುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದತ್ತ ಬೊಟ್ಟು ಮಾಡುತ್ತಲೇ ಇದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಪ್ರಮಾಣವಚನ ಸ್ವೀಕರಿಸಿದ 2 ವಾರಗಳಲ್ಲೇ ರೈತರ ಸಾಲ ಮನ್ನಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಕಳೆದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಬಹು ನಿರೀಕ್ಷಿತವಾಗಿತ್ತು, ಆದರೆ ಸಿದ್ದರಾಮಯ್ಯನವರು ರೈತರ ನಿರೀಕ್ಷೆಯನ್ನು ಹುಸಿಗೊಳಿಸಿದ್ದರು. ಅದರ ಆಕ್ರೋಶವಿನ್ನೂ ರಾಜ್ಯದಲ್ಲಿ ತಣ್ಣಗಾಗಿಲ್ಲ. ಇದೇ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರು, ಉತ್ತರ ಪ್ರದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದರ ಪರಿಣಾಮ ನಮ್ಮ ರಾಜ್ಯದ ಆಡಳಿತ ವಿರೋಧಿ ಅಲೆ ಬಲಗೊಳ್ಳಲು ಮತ್ತಷ್ಟು ಕಾರಣವಾಗಬಹುದು.

ಇಚ್ಛಾಶಕ್ತಿ ಇರಬೇಕು. ಅದಿಲ್ಲದಿದ್ದಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಗೂಬೆ ಕೂಡಿಸುವುದು, ಆರೋಪ ಮಾಡುವುದರಲ್ಲೇ ಕಾಲ ಹರಣ ಮಾಡುವುದು ಸಾಮಾನ್ಯವಾಗಿರುತ್ತದೆ. ಆರಂಭದ ದಿನಗಳಿಂದಲೂ ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯುತ್ತಲೇ ಬಂದಿರುವ ಸಿದ್ದರಾಮಯ್ಯನವರು, ತಮ್ಮ ಅಸಹಕಾರ ತೋರುತ್ತಲೇ ಬಂದಿದ್ದಾರೆ. ಕೇಂದ್ರದತ್ತ ಒಂದು ಟೀಕಾಸ್ತ್ರವನ್ನು ಸದಾ ಸಿದ್ಧವಾಗಿಯೇ ಇಟ್ಟುಕೊಂಡಿರುತ್ತಾರೆ ಕೂಡಾ.

ಸಾಲ ಮನ್ನಾ ಉರುಳು
ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲು ಹಿಂದೇಟು ಹಾಕಿದ್ದಾರೆ. ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಉಪ ಚುನಾವಣೆಯ ಫಲಿತಾಂಶದಲ್ಲಿ ಇದು ಪ್ರತಿಕೂಲ ಪರಿಣಾಮ ಎದುರಿಸುವ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಆಡಳಿತಾರೂಢ ವ್ಯಕ್ತಿಗೆ ರಾಜ್ಯದ ಜನರ ಹಿತ, ಅನುಕೂಲಗಳೇ ಹೆಚ್ಚಾಗಬೇಕು. ರಾಜಕೀಯ ಬಿಟ್ಟು ಸಮಾಜದ ಏಳ್ಗೆಗೆ ಶ್ರಮಿಸುವುದನ್ನು ಜನ ಅಪೇಕ್ಷಿಸುತ್ತಾರೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನಿಬೇಕಿದೆ.

 

 

 

 

 

 

 

 

Recent News

Back To Top
error: Content is protected !!