ನವದೆಹಲಿ: ಬ್ರಿಟನ್ 27 ರಾಷ್ಟ್ರಗಳ ಐರೋಪ್ಯ ಒಕ್ಕೂಟ(ಬ್ರೆಕ್ಸಿಟ್) ದಿಂದ ನಿರ್ಗಮಿಸಿದ ಬಳಿಕ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ನಡೆಸುವ ಗುರಿ ಹೊಂದಿದೆ. ಬ್ರಿಟನ್ನ ಉನ್ನತ ನೀತಿ ರಚನಕಾರರು ೨ ದಿನಗಳ ಭಾರತ ಭೇಟಿಯಲ್ಲಿದ್ದು, ಭಾರತ-ಯುಕೆ 9ನೇ ಆರ್ಥಿಕ ಮತ್ತು ಹಣಕಾಸು ಮಾತುಕತೆ ವೇಳೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಯುಕೆ ವ್ಯಾಪಾರ ಸಂಬಂಧಗಳನ್ನು ಬಲಪಡಿಸಲಿದೆ ಮತ್ತು ಬಹುಪಕ್ಷೀಯ ವೇದಿಕೆಯಲ್ಲಿ ಒಟ್ಟಾಗಿ ಕೆಲಸ ನಿರ್ವಹಿಸಲಿದೆ. ಎರಡೂ ರಾಷ್ಟ್ರಗಳು ಜಿ-20, ಐಎಂಎಫ್, ವಿಶ್ವ ಬ್ಯಾಂಕ್ ಮತ್ತಿತರ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸಹಕಾರ ಹೆಚ್ಚಿಸಲಿದೆ ಎಂದು ಮಾತುಕತೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಬ್ರಿಟನ್ ವಿತ್ತಮಂತ್ರಿ ಫಿಲಿಪ್ ಹ್ಯಾಮಂಡ್ ಹೇಳಿದ್ದಾರೆ.
ಎರಡೂ ರಾಷ್ಟ್ರಗಳು ಮುಕ್ತ ಮಾರುಕಟ್ಟೆ ಮತ್ತು ವ್ಯಾಪಾರ, ಗಡಿಯಾಚೆಗಿನ ತೆರಿಗೆ ವಂಚನೆ ಮಾತುಕತೆ ಮತ್ತು ಎರಡೂ ದೇಶಗಳ ನಾಗರಿಕರು ವಿದೇಶಿ ಹಣಕಾಸು ಖಾತೆಗಳಲ್ಲಿ ಠೇವಣಿ ಮಾಡಿರುವ ಹಣದ ಮಾಹಿತಿ ಹಂಚಿಕೊಳ್ಳಲು ನಿರ್ಧರಿಸಲಾಗಿದೆ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.
ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ ಅಡಿಯಲ್ಲಿ ಭಾರತ-ಯುಕೆ ಜಂಟಿ ನಿಧಿ ಸ್ಥಾಪಿಸುವ ಕಾರ್ಯದಲ್ಲಿ ಪ್ರಗತಿ ಹೊಂದಿರುವ ಬಗ್ಗೆ ವಿವರ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.