ನವದೆಹಲಿ: ಫೇಸ್ಬುಕ್ ಇಂಕ್ ಒಡೆತನದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸ್ಆ್ಯಪ್ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಇದು ಜಾಗತಿಕವಾಗಿ ವಾಟ್ಸ್ಆಪ್ನ ಪ್ರಥಮ ಯೋಜನೆಯಾಗಿದೆ.
ವಾಟ್ಸ್ಆ್ಯಪ್ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ ವ್ಯಕ್ತಿಯಿಂದ-ವ್ಯಕ್ತಿಗೆ ಪಾವತಿ ಮಾಡಬಹುದಾದ ಪಾವತಿ ಸೇವೆ ಆರಂಭಿಸುವಲ್ಲಿ ಕಾರ್ಯನಿರತವಾಗಿದೆ ಎಂದು ಮಾಧ್ಯಮ ವೆಬ್ಸೈಟ್ ‘ದ ಕೆನ್’ ವರದಿ ಮಾಡಿದೆ.
ನಗದು ವರ್ಗಾವಣೆ ಆಪ್ ಯೂನಿಫೈಡ್ ಪೇಮೆಂಟ್ ಈಮಟರ್ಫೇಸ್ (ಯುಪಿಐ) ಮತ್ತು ವ್ಯಾಪಾರಿ ಪಾವತಿ ಆಪ್ ಭೀಮ್ ಆಪ್ನ ಮಾಹಿತಿ ಮತ್ತು ಜ್ಞಾನವನ್ನು ಹೊಂದಿದ ಆರ್ಥಿಕ ಮತ್ತು ತಾಂತ್ರಿಕ ಹಿನ್ನೆಲೆ ಹೊಂದಿದ ಅಭ್ಯರ್ಥಿಗಳನ್ನು ನೇಮಕ ಮಾಡಲು ಪ್ರಯತ್ನಿಸುತ್ತಿರುವುದಾಗಿ ವಾಟ್ಸ್ಆ್ಯಪ್ ವೆಬ್ಸೈಟ್ ತಿಳಿಸಿದೆ.
ಭಾರತ ಒಂದು ಪ್ರಮುಖ ದೇಶವಾಗಿದ್ದು, ಭಾರತದ ಡಿಜಿಟಲ್ ಇಂಡಿಯಾ ಯೋಜನೆಗೆ ಕೊಡುಗೆ ನೀಡುವ ನಮ್ಮ ಪಾತ್ರವನ್ನು ಅರಿತಿದ್ದೇವೆ ಎಂದು ವಾಟ್ಸ್ಆ್ಯಪ್ ವಕ್ತಾರರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನವೆಂವರ್ 2016ರಲ್ಲಿ ನೋಟು ನಿಷೇಧ ಮಾಡಿದ ಬಳಿಕ ಡಿಜಿಟಲ್ ವ್ಯವಹಾರಗಳು ಹೆಚ್ಚಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.