ನವದೆಹಲಿ: ಇ-ವೀಸಾ ಅಡಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಹಿಂದಿನ ಒಂದು ತಿಂಗಳ ಬದಲು ಎರಡು ತಿಂಗಳು ಭಾರತದಲ್ಲಿ ವಾಸ್ತವ್ಯ ಹೂಡಬಹುದು. ಅವರು ಡಬಲ್ ಎಂಟ್ರಿ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಚಿಕಿತ್ಸೆಗಾಗಿ ಆಗಮಿಸುವ ಪ್ರವಾಸಿಗರು ತ್ರಿಪಲ್ ಎಂಟ್ರಿ ಸೌಲಭ್ಯಗಳನ್ನು ಅನುಭವಿಸಬಹುದು ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಎಪ್ರಿಲ್ 1ರಿಂದ ಹೊಸ ಉದಾರೀಕೃತ ಇ-ವೀಸಾ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಇದರ ಅಡಿಯಲ್ಲಿ ಪ್ರವಾಸಿಗರು ಭಾರತದಲ್ಲಿ ತಂಗುವ ಅವಧಿಯನ್ನು 30ರಿಂದ 60 ದಿನಗಳಿಗೆ ಹೆಚ್ಚಿಸಲಾಗಿದೆ. ಪ್ರವಾಸಿಗರು ಹಾಗೂ ಉದ್ಯಮಿಗಳು 2 ತಿಂಗಳು ಭಾರತದಲ್ಲಿ ಉಳಿಯಬಹುದಾಗಿದ್ದು, ಡಬಲ್ ಎಂಟ್ರಿ ಸೌಲಭ್ಯ ಪಡೆಯಲಿದ್ದಾರೆ. ಇ-ವೀಸಾದ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸುವವರು ತ್ರಿಪಲ್ ಎಂಟ್ರಿ ಸೌಲಭ್ಯ ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಇ-ವೀಸಾ ಸೌಲಭ್ಯವನ್ನು ಇ-ಪ್ರವಾಸಿ ವೀಸಾ, ಇ-ವ್ಯವಹಾರ ವೀಸಾ ಮತ್ತು ಇ-ವೈದ್ಯಕೀಯ ವೀಸಾ ಎಂದು 3 ವರ್ಗಗಳಾಗಿ ವಿಂಗಡಿಸಲಾಗಿದೆ. ಕೇಂದ್ರ ಸರ್ಕಾರ ಪ್ರವಾಸೋದ್ಯಮ, ವ್ಯಾಪಾರ ಪ್ರವಾಸ ಪ್ರೋತ್ಸಾಹಿಸಲು ಮತ್ತು ಹೂಡಿಕೆದಾರರನ್ನು ಉತ್ತೇಜಿಸಲು ಇ-ವೀಸಾ ಸೌಲಭ್ಯದ ನಿಯಮವನ್ನು ಸಡಿಲಿಸಿದೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಡಬಲ್ ಎಂಟ್ರಿ ಸೌಲಭ್ಯದಿಂದಾಗಿ ಪ್ರವಾಸಿಗರು ನೆರೆಯ ಭೂತಾನ್, ಇಂಡೋನೇಷ್ಯ ಮೊದಲಾದ ರಾಷ್ಟ್ರಗಳಿಗೆ ಭೇಟಿ ನೀಡಿ ವೀಸಾ ಅವಧಿ ಮುಗಿಯುವಷ್ಟರಲ್ಲಿ ಭಾರತಕ್ಕೆ ಮರಳಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.