ಅಲಹಾಬಾದ್: ಈ ಶತಮಾನದಲ್ಲಿ ತಂತ್ರಜ್ಞಾನ ಒಂದು ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ತಂತ್ರಜ್ಞಾನ ನಮ್ಮ ನ್ಯಾಯಾಂಗದಲ್ಲಿ ದೊಡ್ಡ ವ್ಯಾಪ್ತಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ನ 150ನೇ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ತಂತ್ರಜ್ಞಾನದಿಂದ ನ್ಯಾಯಾಲಯಗಳ ವಿಚಾರಣೆ ಕೆಲಸ ಸುಲಭವಾಗಿದ್ದು, ಪ್ರಮುಖ ಪ್ರಕರಣಗಳಲ್ಲಿ ಕೈದಿಗಳು ಹಾಜರಾಗಲು ಸಾಧ್ಯವಾಗದಿದ್ದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಕೈದಿಗಳ ವಿಚಾರಣೆ ನಡೆಸಲಾಗುತ್ತದೆ. ಅಲಹಾಬಾದ್ ಹೈಕೋರ್ಟ್ ನಮ್ಮ ನ್ಯಾಯಾಂಗದ ‘ತೀರ್ಥ ಕ್ಷೇತ್ರ’ ಇದ್ದಂತೆ. ನಮ್ಮ ಸ್ವಾತಂತ್ರ ಹೋರಾಟಗಾರರ ಕನಸಾಗಿದ್ದ ಸಮರ್ಥ ನ್ಯಾಯಾಂಗದ ನವ ಭಾರತದ ರಚನೆ ನಿರ್ಣಾಯಕ ಎಂದು ಹೇಳಿದ್ದಾರೆ.
ಮೇ 2014ರಿಂದ ಈವರೆಗೆ ಬಳಕೆಯಲ್ಲಿಲ್ಲದ ಸುಮಾರು 1200ಕ್ಕೂ ಅಧಿಕ ಕಾನೂನುಗಳನ್ನು ತೆಗೆದು ಹಾಕಲಾಗಿದೆ, 2022ರಲ್ಲಿ 75ನೇ ಸ್ವಾತಂತ್ರ್ಯವನ್ನು ಗುರುತಿಸಲು ನವ ಭಾರತದ ರಚನೆಗೆ ಇಂದಿನಿಂದಲೇ ಯೋಚಿಸೋಣ. ಭಾರತದ ಪ್ರತಿ ನಾಗರಿಕರು ಇದಕ್ಕೆ ಒಂದು ನಕ್ಷೆ ರೂಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಹಿಂದೆ ಬುದ್ಧಿವಂತ ವಕೀಲರು ಪ್ರಕರಣಗಳ ಕಾನೂನಿನ ವಿವರಗಳನ್ನು ಮತ್ತು ವಿವಿಧ ನಿರ್ಣಯಗಳ ತೀರ್ಪನ್ನು ಕಂಡು ಹಿಡಿಯಲು ಅಗಾಧ ಪ್ರಮಾಣದ ಪುಸ್ತಕಗಳನ್ನು ಓದುತ್ತಿದ್ದರು. ಈಗ ವಕೀಲರು ‘ಗೂಗಲ್ ಗುರು’ವನ್ನು ಬಳಸಿ ಕ್ಷಣಗಳಲ್ಲಿ ಉತ್ತರವನ್ನು ಕಂಡು ಹಿಡಿಯುತ್ತಾರೆ. ಇದು ನ್ಯಾಯಾಲಯಗಳಲ್ಲಿ ವಾದಗಳ ಗುಣಮಟ್ಟವನ್ನು ಸುಧಾರಿಸಿದೆ ಹಾಗೂ ತೀರ್ಪುಗಾರರ ಕೆಲಸವನ್ನು ಸುಲಭಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.