ನವದೆಹಲಿ: ದೇಶದ ವಿವಿಧ 26 ಭಾಗಗಳಲ್ಲಿ ನಡೆಯುವ ವಿಶ್ವದ ಅತೀದೊಡ್ಡ ಹ್ಯಾಕಥಾನ್ ‘ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್’ ಫಿನಾಲೆಯನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. 10 ಸಾವಿರ ಪ್ರೋಗ್ರಾಮರ್ಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಈ ಹ್ಯಾಕಥಾನನ್ನು ಸಾಮಾಜಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಆಯೋಜಿಸಲಾಗಿದೆ. 29 ಸಚಿವಾಲಯಗಳು ಮತ್ತು ಸರ್ಕಾರಿ ಇಲಾಖೆಗಳು ಒಟ್ಟು 598 ಸಮಸ್ಯೆಗಳನ್ನು ಪಟ್ಟಿ ಮಾಡಿವೆ. ಇದಕ್ಕೆ 42,000 ವಿದ್ಯಾರ್ಥಿಗಳನ್ನೊಳಗೊಂಡ 7,500 ತಂಡಗಳಿಂದ ಪರಿಹಾರಗಳೂ ಬಂದಿವೆ.
ಇಂದು ರಾತ್ರಿ 8 ಗಂಟೆಗೆ ಹ್ಯಾಕಥಾನ್ನ ಫಿನಾಲೆ ಆರಂಭವಾಗಲಿದೆ. 36 ಗಂಟೆಗಳ ಫಿನಾಲೆ ಇದಾಗಿದ್ದು, ಎ.2 ರಾತ್ರಿ 8 ಗಂಟೆಯವರೆಗೂ ಮುಂದುವರೆಯಲಿದೆ. 28 ರಾಜ್ಯಗಳ 10 ಸಾವಿರ ವಿದ್ಯಾರ್ಥಿಗಳನ್ನೊಳಗೊಂಡ 1,266ತಂಡಗಳು ಫಿನಾಲೆಯಲ್ಲಿ ಭಾಗವಹಿಸಲಿವೆ. ಇದರಲ್ಲಿ ಆಯ್ಕೆಯಾಗುವ ತಂಡಗಳು ಸಾಫ್ಟ್ವೇರ್ ಅಥವಾ ಮೊಬೈಲ್ ಆಪ್ ರಚಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲಿವೆ.
ಬಳಿಕ ಆಯಾ ಸಚಿವಾಲಯಗಳಿಂದ, ಸಂಸ್ಥೆಗಳಿಂದ ಬಂದ ಜಡ್ಜ್ಗಳು ವಿಜೇತರನ್ನು ಆರಿಸಲಿದ್ದಾರೆ. ವಿಜೇತರಿಗೆ 1 ಲಕ್ಷ, ದ್ವಿತೀಯ ಬಂದವರಿಗೆ ೭೫,೦೦೦ ಮತ್ತು ತೃತೀಯ 50 ಸಾವಿರ ಬಹುಮಾನ ನೀಡಲಾಗುತ್ತದೆ.
ಬಳಿಕ ಈ ಸಾಫ್ಟ್ವೇರ್ಗಳನ್ನು ಸಚಿವಾಲಯಗಳು ತಮ್ಮ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಬಳಕೆ ಮಾಡಿಕೊಳ್ಳಲಿವೆ.
ಈ ಫಿನಾಲೆಗಾಗಿ 2,000 ಮೆಂಟರ್ಗಳು ವಿದ್ಯಾರ್ಥಿಗಳಿಗೆ ಆನ್ಲೈನ್ ಟ್ರೈನಿಂಗನ್ನೂ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.