ನವದೆಹಲಿ: ಕೇಂದ್ರ ಸರ್ಕಾರ 2016ರ ನವೆಂಬರ್ನಲ್ಲಿ ಹಳೆ ನೋಟು ನಿಷೇಧ ಮಾಡಿದ ಬಳಿಕ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ನಡೆಸಲಾದ ಡಿಜಿಟಲ್ ವ್ಯವಹಾರ ಶೇ.584ರಷ್ಟು (0.3ರಿಂದ 4.5 ಮಿಲಿಯನ್) ಹೆಚ್ಚಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದೇ ಅವಧಿಯಲ್ಲಿ ಆಧಾರ್ ಬಳಕೆ ಮೂಲಕ ಡಿಜಿಟಲ್ ಪಾವತಿ ಶೇ.1352ರಷ್ಟು ಅಭೂತಪೂರ್ವ ಏರಿಕೆ (0.7-2.7 ಮಿಲಿಯನ್)ಯಾಗಿದೆ ಎಂದು ನೀತಿ ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇಂದು ವಾರ್ಷಿಕ ಸುಮಾರು 8 ಬಿಲಿಯನ್ ವಹಿವಾಟು ಡಿಜಿಟಲ್ ವ್ಯವಹಾರ ವಿಧಾನದ ಮೂಲಕ ನಡೆಯುತ್ತಿದ್ದು, ಕೇಂದ್ರ ಸರ್ಕಾರ ಕಪ್ಪು ಹಣ ಕೊನೆಗೊಳಿಸಲು ಪ್ರಸಕ್ತ ವರ್ಷದಲ್ಲಿ ಡಿಜಿಟಲ್ ವ್ಯವಹಾರವನ್ನು 25 ಮಿಲಿಯನ್ಗೆ ಹೆಚ್ಚಿಸುವ ಯೋಜನೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ಡಿಸೆಂಬರ್ 25, 2016ರಲ್ಲಿ ಬಿಡುಗಡೆ ಮಾಡಲಾದ ಲಕಿ ಗ್ರಾಹಕ್ ಯೋಜನೆ ಮತ್ತು ಡಿಜಿ ಧನ್ ವ್ಯಾಪಾರ್ ಯೋಜನೆ ಅಡಿಯಲ್ಲಿ ಈವರೆಗೆ 14 ಲಕ್ಷ ಗ್ರಾಹಕರು ಹಾಗೂ 77 ಸಾವಿರ ವ್ಯಾಪಾರಸ್ಥರಿಗೆ 226 ಕೋಟಿ ರೂ. ಬಹುಮಾನ ವಿತರಿಸಲಾಗಿದೆ.
ಕೇಂದ್ರ ಸರ್ಕಾರದ ಡಿಜಿಟಲ್ ವ್ಯವಹಾರವನ್ನು ಉತ್ತೇಜಿಸುವ ಯೋಜನೆಯಡಿ ದೇಶದ 100 ನಗರಗಳಲ್ಲಿ ಡಿಜಿ ಧನ್ ಮೇಳಗಳನ್ನು ಆಯೋಜಿಸಲಾಗುತ್ತಿದೆ. 100 ದಿನಗಳ ಡಿಜಿಧನ್ ಮೇಳ ಮೆಗಾ ಡ್ರಾ ಎಪ್ರಿಲ್ 14ರಂದು ಕೊನೆಗೊಳ್ಳಲಿದೆ.
5000 ಆರ್ಥಿಕ ಸಂಸ್ಥೆಗಳು 15 ಲಕ್ಷ ಗ್ರಾಹಕರನ್ನು ಹೊಂದಿದ್ದು, 16 ಸಾವಿರ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ಕ್ಯಾಶ್ಲೆಸ್ ಎಂದು ಘೋಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.