ಬೀಜಿಂಗ್: ಚೀನಾ ತನ್ನ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತ್ಯ ಝ್ಸಿನ್ಜಿಯಾಂಗ್ನಲ್ಲಿ ಬುರ್ಖಾ, ವೇಲ್ ಮತ್ತು ಅಸಹಜ ರೀತಿಯಲ್ಲಿ ಗಡ್ಡ ಬಿಡುವುದಕ್ಕೆ ನಿಷೇಧವನ್ನು ಹೇರಿದೆ. ಅಲ್ಲದೇ ಸರ್ಕಾರಿ ಟೆಲಿವಿಷನ್ನನ್ನು ಮಾತ್ರವೇ ನೋಡಬೇಕು ಎಂಬ ಆದೇಶವನ್ನು ಇಲ್ಲಿ ಹೇರಲಾಗಿದೆ.
ಈ ನಿಯಮವನ್ನು ಇಂದಿನಿಂದಲೇ ಅದು ಜಾರಿಗೊಳಿಸಿದ್ದು, ಬುರ್ಖಾ ಧರಿಸಿದವರಿಗೆ ಏರ್ಪೋರ್ಟ್, ರೈಲ್ವೇ ಸ್ಟೇಶನ್, ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಅಲ್ಲದೇ ಇವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಅಸಹಜ ಎಂಬ ರೀತಿಯಲ್ಲಿ ಗಡ್ಡ ಬಿಡುವುದಕ್ಕೂ ನಿಷೇಧ ಹೇರಲಾಗಿದೆ. ಇಂತವರಿಗೆ ಟಿವಿ, ರೇಡಿಯೋ, ಇನ್ನಿತರ ಸೌಲಭ್ಯಗಳನ್ನು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಮದುವೆ ಸಂದರ್ಭ ಕಾನೂನು ಪ್ರಕ್ರಿಯೆ ಪಾಲನೆಯನ್ನು ಕಡ್ಡಾಯ ಮಾಡಿದೆ, ಕುಟುಂಬ ಯೋಜನೆಯನ್ನು ಕಡ್ಡಾಯ ಮಾಡಿದೆ. ಅಲ್ಲದೇ ಮಕ್ಕಳನ್ನು ನಿರಂತರವಾಗಿ ಶಾಲೆಗಳಿಗೆ ಕಳುಹಿಸಬೇಕು ಎಂದು ಸೂಚಿಸಿದೆ. ಅಲ್ಲದೇ ಸೆಕ್ಯೂಲರ್ ಬದುಕಿಗೆ ಕಂಟಕವಾಗುವಂತೆ ಹಲಾಲ್ ಶಬ್ದವನ್ನು ಬಳಸದಂತೆ ಎಚ್ಚರಿಕೆ ನೀಡಿದೆ.
ಝ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ 10 ಮಿಲಿಯನ್ ಉಯ್ಘರ್ ಮುಸ್ಲಿಮರು ವಾಸಿಸುತ್ತಿದ್ದಾರೆ. ಇಸ್ಲಾಂ ಮೂಲಭೂತವಾದಿಗಳು ತನ್ನ ನಾಡಲ್ಲಿ ಹುಟ್ಟಿಕೊಳ್ಳಬಾರದು ಎಂಬ ಕಾರಣಕ್ಕೆ ಚೀನಾ ಈ ನಿರ್ಬಂಧಗಳನ್ನು ಹೇರಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.