ರಾಯಚೂರು: ಬರೋಬ್ಬರಿ 2.80 ಲಕ್ಷ ಬಾಸುಮತಿ ಅಕ್ಕಿಯ ಮೇಲೆ ಶ್ರೀರಾಮನ ಹೆಸರು ಬರೆಯುವ ಮೂಲಕ ಗೀತಾರಾಣಿ ದಾಖಲೆ ಮಾಡಿದ್ದು, ಅವರ ಸಾಧನೆಯನ್ನು ಗಿನ್ನಿಸ್ ರೆಕಾರ್ಡ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಶ್ರೀರಾಮ ನಾಮ ಬರೆದ ಅಕ್ಕಿಯನ್ನು ಸಮರ್ಪಿಸಲಾಗುವುದು ಎಂದಿದ್ದಾರೆ.
ರಾಜಾಪೂರ ಕೃಷ್ಣಾಮೂರ್ತಿ ಅವರ ಪುತ್ರಿಯಾದ ಗೀತಾರಾಣಿ ಅವರು ಸತತ ಆರು ತಿಂಗಳ ಕಾಲ 2.80 ಲಕ್ಷ ಬಾಸುಮತಿ ಅಕ್ಕಿ ಮೇಲೆ ಶ್ರೀರಾಮ ನಾಮ ಹೆಸರು ಬರೆಯುವ ಮೂಲಕ ಶ್ರದ್ಧೆ ಹಾಗೂ ಭಕ್ತಿಗೆ ಸಾಕ್ಷಿಯಾಗಿದ್ದಾರೆ ಎಂದರು.
ದಿನವೊಂದಕ್ಕೆ 4 ಸಾವಿರ ಅಕ್ಕಿ ಕಾಳಿನ ಮೇಲೆ ಶ್ರೀರಾಮನ ಹೆಸರು ಬರೆಯುವಲ್ಲಿ ಪಾಲಕರ ಸಹಕಾರ ಅನನ್ಯವಾಗಿದೆ. ಗೀತಾರಾಣಿ ಅವರು ಪೆನ್ನಿನಿಂದ ಬರೆದಿರುವ ಶ್ರೀರಾಮ ಹೆಸರಿನ ಬಾಸುಮತಿ ಅಕ್ಕಿಯನ್ನು ಅಯೋಧ್ಯೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ಅರ್ಪಿಸುವ ಧ್ಯೇಯ ಹೊಂದಲಾಗಿದೆ ಎಂದು ಕೃಷ್ಣಮೂರ್ತಿ ಹೇಳಿದ್ದಾರೆ.
ಶ್ರೀರಾಮನ ಹೆಸರಲ್ಲಿ ಬರೆಯಲಾಗಿರುವ ಅಕ್ಕಿ ಕಾಳನ್ನು ಶ್ರೀರಾಮ ನವಮಿ ಕಲ್ಯಾಣ ಸೇರಿದಂತೆ ಗಿನ್ನಿಸ್ ರೆಕಾರ್ಡ್ ಪ್ರಸ್ತಾಪಕ್ಕೆ ಕಳುಹಿಸುವ ಗುರಿ ಹೊಂದಲಾಗಿದೆ ಎಂದು ಗೀತಾರಾಣಿ ತಿಳಿಸಿದ್ದಾರೆ.
ಆರ್ಯವೈಶ್ಯ ಮಹಾಸಭಾ ಹಾಗೂ ಮಹಾಮಂಡಳಿ ವತಿಯಿಂದ ಗೀತಾರಾಣಿಗೆ ಗೌರವಿಸಲಾಯಿತು. ಆರ್ಯವೈಶ್ಯ ಸಮಾಜ ಮುಖಂಡರಾದ ಬಿ.ಗೋವಿಂದು, ಜಗದೀಶ್ ಗುಪ್ತಾ, ಗಾಣದಾಳ ಲಕ್ಷ್ಮೀಪತಿ, ರಾಜಾಪೂರ ಕೃಷ್ಣಾಮೂರ್ತಿ, ಸತೀಶ್, ಈರಣ್ಣ ಮುದುಗಲ್ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.