ರಾಯಚೂರು: ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಬ್ಯಾಂಕಿನ ಸಿಬ್ಬಂದಿಗಳೇ ಸಾಲಗಾರರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನಿಜಲಿಂಗಪ್ಪ ಕಾಲೋನಿಯ ಶಾಖೆಯ 2015 ರಲ್ಲಿ ಲಲಿತಾ ಎನ್ನುವವರು ಗೃಹ ಸಾಲಕ್ಕಾಗಿ 6 ಲಕ್ಷ ರೂಪಾಯಿಗಳನ್ನು ಆರ್.ಡಿ.ಸಿ.ಸಿ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಇಲ್ಲಿಯ ವರೆಗೆ ಕೇವಲ 2.35 ಲಕ್ಷ ಬಡ್ಡಿ ಮಾತ್ರ ಕಟ್ಟಲಾಗಿದೆಯಂತೆ. ಇನ್ನು ನಗದು 6 ಲಕ್ಷ ರೂ ಕಟ್ಟಬೇಕಿದೆ.
ಲಲಿತಾ ಎನ್ನುವವರು ತಮ್ಮ ಮಗ ನಾಗರಾಜ ಹೆಸರಿನ ಮೇಲೆ ಶ್ಯುರಿಟಿ ನೀಡಿದ್ದು ಬ್ಯಾಂಕಿನ ಸಿಬ್ಬಂದಿಗಳು ಹಣ ಕಟ್ಟಬೇಕೆಂದು ಸಾಕಷ್ಟು ಬಾರಿ ತಿಳಿಸಿದ್ದರಂತೆ. ಹಣ ಪಾವತಿ ಮಾಡದ ಕಾರಣ ಬ್ಯಾಂಕಿನ ಸಿಬ್ಬಂದಿಗಳೇ ಸಾಲಗಾರರ ಮನೆಮುಂದೆ ಸಾಲ ಕಟ್ಟುವಂತೆ ಪ್ರತಿಭಟನೆ ನಡೆಸಿದ್ದಾರೆ.
ಬ್ಯಾಂಕ್ನ ಜನರಲ್ ಮ್ಯಾನೇಜರ್ ಶ್ರೀಕಾಂತ, ರಾಘವೇಂದ್ರ, ನಂದ ಕಟ್ಟಿಮನಿ, ಸಂಗಪ್ಪ ಹಾಗೂ ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.