ಲಂಡನ್: ವಿವಾದಿತ ಪಿಒಕೆ ಗಡಿಯಲ್ಲಿ ಪಾಕಿಸ್ಥಾನ ಆಕ್ರಮಿತ ಗಿಲ್ಗಿಟ್-ಬಲ್ತಿಸ್ಥಾನ್ನ್ನು ತನ್ನ ಐದನೇ ಪ್ರಾಂತ್ಯವನ್ನಾಗಿ ಘೋಷಿಸುವ ಅನೈತಿಕ ಕ್ರಮವನ್ನು ವಿರೋಧಿಸಿ ಯುನೈಟೆಡ್ ಕಿಂಗ್ಡಮ್ ಸಂಸತ್ನಲ್ಲಿ ಪ್ರಸ್ತಾಪ ಮಂಡಿಸಲಾಗಿದೆ.
ಯುಕೆಯ ಹೌಸ್ ಆಫ್ ಕಾಮನ್ಸ್ನ ಕನ್ಸರ್ವೇಟಿವ್ ಪಕ್ಷದ ಸಂಸದ, ಕಾಶ್ಮೀರಿ ಹಿಂದೂಗಳ ಹಕ್ಕುಗಳ ಬೆಂಬಲಿಗ ಬಾಬ್ ಬ್ಲಾಕ್ಮನ್, ‘ಅನ್ನೆಕ್ಸೇಷನ್ ಆಫ್ ಗಿಲ್ಗಿಟ್-ಬಲ್ತಿಸ್ಥಾನ್ ಆ್ಯಸ್ ಫಿಫ್ತ್ ಪ್ರಾವಿನ್ಸ್’ ಶೀರ್ಷಿಕೆ ಅಡಿ ಅರ್ಲಿ ಡೇ ಮೋಷನ್ (ಇಡಿಎಮ್) ಪ್ರಸ್ತಾಪವನ್ನು ಸಂಸತ್ನಲ್ಲಿ ಮಂಡಿಸಿದ್ದಾರೆ.
ಇಡಿಎಮ್ ಒಂದು ನಿರ್ದಿಷ್ಟ ಕಾರಣ ಅಥವಾ ಸಮಸ್ಯೆಯ ವಿಚಾರದ ಬಗ್ಗೆ ಜನರ ಗಮನ ಸೆಳೆಯಲು ಹೌಸ್ ಆಫ್ ಕಾಮನ್ಸ್ನಲ್ಲಿ ಮಂಡಿಸಲಾಗುವ ಔಪಚಾರಿಕ ಪ್ರಸ್ತಾವನೆಯಾಗಿದೆ.
ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶವನ್ನು ಪಾಕಿಸ್ಥಾನ 1947ರಲ್ಲಿ ಅಕ್ರಮವಾಗಿ ಆಕ್ರಮಿಸೊಕೊಂಡಿದ್ದು, ಈ ವಿವಾದಿತ ಪ್ರದೇಶವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
ಈಗಾಗಲೇ ವಿವದಿತ ಗಿಲ್ಗಿಟ್-ಬಲ್ತಿಸ್ಥಾನ ಪ್ರದೇಶವನ್ನು ತನ್ನ ಐದನೇ ಪ್ರಾಂತ್ಯವನ್ನಾಗಿಸುವ ಪಾಕಿಸ್ಥಾನದ ಅನಿಯಂತ್ರಿತ ಘೋಷಣೆಯನ್ನು ಯುಕೆ ಸಂಸತ್ತು ಖಂಡಿಸುತ್ತದೆ ಎಂದು ಪ್ರಸ್ತಾಪಿತ ಇಡಿಎಮ್ ಹೇಳಿದೆ.
1947ರಿಂದ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಒಳಗೊಂಡ ಪಾಕ್ ಆಕ್ರಮಿತ ಗಿಲ್ಗಿಟ್-ಬಲ್ತಿಸ್ಥಾನ್ ಭಾರತದ ಜಮ್ಮು ಮತ್ತು ಕಾಶ್ಮೀರದ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಭಾಗವಾಗಿದೆ ಎಂಉ ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.