ಕೊಪ್ಪಳ:ಲಿಂ. ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳು ಹಾಗೂ ಲಿಂ. ಶ್ರೀಶಿವಶಂಕರ ಮಹಾಸ್ವಾಮಿಗಳು ತಮದಡ್ಡಿ ಈ ಉಭಯ ಪೂಜ್ಯರ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಪಾದಯಾತ್ರೆ ಜರುಗಿತು.
ಮಳೆಮಲ್ಲೇಶ್ವರ ದೇವಸ್ಥಾನದಿಂದ ಹೊರಟ ಪಾದಯಾತ್ರೆಯು ಬನ್ನಿಕಟ್ಟಿ, ಕೇಂದ್ರಬಸ್ ನಿಲ್ದಾಣ, ಅಶೋಕಸರ್ಕಲ್, ಜವಾಹರ ರಸ್ತೆ, ಗಡಿಯಾರ ಕಂಬ ಹಾಗೂ ಶಾರದಾ ಚಿತ್ರ ಮಂದಿರದ ಮೂಲಕ ಗವಿಮಠ ತಲುಪಿತು. ಶ್ರೀ ಶಿವಶಾಂತವೀರ ಶರಣರು, ಶ್ರೀ ಹೆಬ್ಬಾಳ ಶ್ರೀಗಳು, ಶ್ರೀಸಂತೆಕಲ್ಲೂರ ಶ್ರೀಗಳು, ಅಣದೂರ ಶ್ರೀಗಳು, ಶ್ರೀ ಹಿರಿಶಾಂತವೀರ ಸ್ವಾಮಿಗಳು ಹೂವಿನ ಹಡಗಲಿ, ಸಿದ್ದೇಶ್ವರ ಸ್ವಾಮಿಗಳು ಮೈನಳ್ಳಿ, ಸೋಮಶೇಖರ ದೇವರು ಕಡ್ಲೆಬಾಳು ಮೊದಲಾದ ಪೂಜ್ಯರು ಭಾಗವಹಿಸಿದ್ದರು.
ನೂತನ ಕಟ್ಟಡ ಉದ್ಘಾಟನೆ
ಪರಮಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು ವೀರೇಶ್ವರ ಪುಣ್ಯಾಶ್ರಮ ಗದಗ ಇವರು ಉದ್ಘಾಟಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜಾನಪದ ಕಲಾವಿದೆ ಶ್ರೀಮತಿ ಸುಕ್ರಜ್ಜಿ ಬೊಮ್ಮಗೌಡ ಇದ್ದರು.
ಶಿವಶಾಂತ ವನ, ಗವಿಮಠ ಆವರಣ (ಯಾತ್ರಿ ನಿವಾಸ ಹತ್ತಿರ) ದಿ.ಶ್ರೀಮತಿ ಚೆನ್ನಬಸಮ್ಮ ಗುರುಸಿದ್ದಪ್ಪ ಕೊತಬಾಳ ಸಾ.ಕೊಪ್ಪಳ ಇವರ ಸ್ಮರಣಾರ್ಥವಾಗಿ ವೃದ್ಧಾಶ್ರಮದ ಕಟ್ಟಡವನ್ನು ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಸ್ ದೊರೆಸ್ವಾಮಿ ಉದ್ಘಾಟಿಸಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪಾಚಾರ್,ನಗರ ಸಭಾ ಅದ್ಯಕ್ಷ ಮಹೇಂದ್ರ ಚೋಪ್ರ, ಹರಗುರು ಚರಮೂರ್ತಿಗಳು ಭಾಗವಹಿಸಿದ್ದರು.
ಬರ ಒಂದು- ಪರಿಹಾರ ಹಲವು ಈ ವಿಷಯದಡಿ ಜಲಚಿಂತನ ಗೋಷ್ಠಿ ಗವಿಮಠದ ಆವರಣದಲ್ಲಿ ಜರುಗಿತು. ಇದರಲ್ಲಿ ಮಳೆ ನೀರನ್ನು ಸಂಗ್ರಹಿಸುವ, ಕೆರೆಗಳನ್ನು ಪುನಶ್ಚೇತನ ಗೊಳಿಸುವ, ಒಣ ಬೇಸಾಯದಲ್ಲಿ ಮಳೆ ನೀರಿನ ನಿರ್ವಹಣೆ, ಬರವನ್ನು ನಿಭಾಹಿಸುವದು ಹೇಗೆ ಎಂಬುದರ ಕುರಿತು ಶಿವಾನಂದ ಕಳವೆ, ಚನ್ನಬಸಪ್ಪ ಕೊಂಬಳಿ, ಬಿ.ವೈಬಂಡಿವಡ್ಡರ, ಮಲ್ಲಣ್ಣ ನಾಗರಾಳ ಹುನುಗುಂದ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.