ಶ್ರೀನಗರ: ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿರುವ ದೇಶದ ಅತೀದೊಡ್ಡ ಸುರಂಗ ಮಾರ್ಗ ಉದ್ಘಾಟನೆಗೆ ಸಜ್ಜುಗೊಂಡಿದೆ. ಈ ಸುರಂಗ ಮಾರ್ಗ ಜಮ್ಮು ಮತ್ತು ಶ್ರೀನಗರದ ನಡುವಣ ಅಂತರವನ್ನು 30 ಕಿ.ಮೀಗಳಿಗೆ ಇಳಿಸಲಿದೆ.
ಎಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಚೆನನಿ-ನಶ್ರಿ ಸುರಂಗವನ್ನು ಲೋಕಾರ್ಪಣೆಗೊಳಿಸಲಿದ್ದಾರೆ, ಬಳಿಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
1200ಮೀಟರ್ ಉದ್ದದ ಸುರಂಗ ಇದಾಗಿದ್ದು, 9.2 ಕಿ.ಮೀ ಉದ್ದದ ಟ್ವಿನ್ ಟ್ಯೂಬ್ ಟನಲ್ನ್ನು ಇದು ಹೊಂದಿದೆ. ಇದರ ನಿರ್ಮಾಣ ಕಾರ್ಯ 2011ರ ಮೇ 23ರಂದು ಆರಂಭಗೊಂಡಿತ್ತು. ಇದಕ್ಕೆ ಒಟ್ಟು 3,720 ಕೋಟಿ ರೂ ವ್ಯಯಿಸಲಾಗಿದೆ.
ದೇಶದಲ್ಲೇ ಮೊದಲು ’ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್’ನ್ನು ಇದು ಹೊಂದಿದೆ. ಇದರಿಂದಾಗಿ ವೆಂಟಿಲೇಶನ್, ಪೈಯರ್ ಕಂಟ್ರೋಲ್ ಸಿಗ್ನಲ್, ಕಮ್ಯೂನಿಕೇಶನ್, ಎಲೆಕ್ಟ್ರಿಕ್ ಸಿಸ್ಟಮ್ ಎಲ್ಲವೂ ಆಟೋಮ್ಯಾಟಿಕ್ ಆಗಿರುತ್ತದೆ.
ಈ ಸುರಂಗ ಮಾರ್ಗ ಕಾರ್ಯನಿರ್ವಹಿಸಿದ ಬಳಿಕ ಜಮ್ಮು ಕಾಶ್ಮೀರದ ಹೆದ್ದಾರಿಯಲ್ಲಿ ಸಂಭವಿಸುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಅಂತ್ಯ ಬೀಳಲಿದೆ. ಒಂದು ಸೈಡ್ ಚಾಲನೆಗೆ ಬಸ್ ಹಾಗೂ ಟ್ರಕ್ 190 ರೂಪಾಯಿ ಪಾವತಿಸಬೇಕು, ಎರಡು ಸೈಡ್ ಚಾಲನೆಗೆ 285 ರೂಪಾಯಿ ಪಾವತಿಸಬೇಕಾಗುತ್ತದೆ. ಗಂಟೆಗೆ 50 ಕಿ.ಮೀ ವೇಗದಲ್ಲಿ ಚಾಲನೆ ಮಾಡುವ ಅವಕಾಶ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.