ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಲೋಕಸಭೆಯಲ್ಲಿ ಕಪ್ಪು ಹಣ ಮಸೂದೆಯನ್ನು ಮಂಡನೆಗೊಳಿಸಿದ್ದಾರೆ. ಅಲ್ಲದೇ ತೆರಿಗೆ ವಂಚಕರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಈ ಕಪ್ಪುಹಣ ಮಸೂದೆಯನ್ನು ಹಣ ಮಸೂದೆ ಎಂದು ಪರಿಗಣಿಸಬೇಕು’ ಎಂದಿದ್ದಾರೆ. ಅಲ್ಲದೇ ಈ ಮಸೂದೆ ದೇಶೀಯ ಕಪ್ಪುಹಣಕ್ಕೆ ಸಂಬಂಧಿಸಿದಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಕಾನೂನು ಬಾಹಿರವಾಗಿ ಸಂಪಾದಿಸಿದ ಹಣವನ್ನು ಬಚ್ಚಿಡುವುದು ಇನ್ನು ಮುಂದೆ ಕಷ್ಟವಾಗಲಿದೆ, ಈ ಮಸೂದೆಯ ಅನ್ವಯ ಬಹಿರಂಗಪಡಿಸದ ವಿದೇಶಿ ಸಂಪತ್ತಿಗೆ ಶೇ.೩೦ರಷ್ಟು ತೆರಿಗೆ ಮತ್ತು ಇನ್ನು ೩೦ ರಷ್ಟು ದಂಡ ವಿಧಿಸಲಿದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.