ಅದ್ಯಾಕೋ ಗೊತ್ತಿಲ್ಲ. ಈ ಮುಸ್ಲಿಂ ಮಹಾನುಭಾವನಿಗೆ ನಾಲ್ಕು ಜನ ಪತ್ನಿಯರನ್ನು ಹೊಂದುವ ಅವಕಾಶವಿದೆ ಎಂಬುದನ್ನು ನೆನಪಿಸಿಕೊಂಡಾಗೆಲ್ಲ, ಕರಳು ಚುರುಕ್ ಎನ್ನಿಸುತ್ತದೆ. ಆ ಭಾಗ್ಯ ಹಿಂದುಗಳಲ್ಲಿ ಇಲ್ಲವಲ್ಲ ಎಂದಲ್ಲ, ಪಾಪ ನಾಲ್ಕು ಜನ ಮಹಿಳೆಯರು, ಒಬ್ಬನನ್ನೇ ಹಂಚಿಕೊಳ್ಳಬೇಕಲ್ಲ ಎಂದು.
ಸಂವಿಧಾನ ಸಮಾನತೆಯನ್ನು ಹೇಳುತ್ತೆ. ಆದರೂ ಅದೇ ಸಂವಿಧಾನ ಬದ್ಧ ಕಾನೂನಿನಡಿಯಲ್ಲಿ ಅನೇಕ ವಿಶಿಷ್ಟ ಸೌಲಭ್ಯ, ಸವಲತ್ತುಗಳನ್ನು ಅಲ್ಪಸಂಖ್ಯಾತರು ಹೊಂದಿರುವುದು ವಾಸ್ತವ. ಅದರಲ್ಲೂ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಹಾಗೆ, ವಿವಾಹ, ವಿಚ್ಛೇದನ, ದತ್ತಕ, ಜೀವನಾಂಶ, ಕುಟುಂಬ ಯೋಜನೆ, ಶೈಕ್ಷಣಿಕ ಹಕ್ಕುಗಳು ಇತ್ಯಾದಿ ವಿಷಯಗಳಲ್ಲಿ ವಿಭಿನ್ನ ನಿಲುವಿನ ಕಾನೂನುಗಳಿರುವುದು ಗಮನಾರ್ಹ.
ನಾನಿಲ್ಲಿ, ಇಸ್ಲಾಂ ಧರ್ಮ, ಕರ್ಮ, ಕುರಾನ್, ಸಂಪ್ರದಾಯ ಇತ್ಯಾದಿ ವಿಷಯಗಳ ಗೊಡವೆಗೆ ಹೋಗಲು ಬಯಸಿಲ್ಲ. ಆದರೆ, ಕೇವಲ ಮಾನವೀಯ ನೆಲೆಯಲ್ಲಿ, ಧರ್ಮನಿರಪೇಕ್ಷವಾಗಿ ಓರ್ವ ಹೆಣ್ಣಿನ ಮನಸ್ಸಿನ ಮೂಲೆಯಲ್ಲಿ ನಿಂತು ಚಿಂತಿಸಿದ ಒಂದು ಆಲೋಚನೆಯ ಲಹರಿ ಇದು.
ಎಲ್ಲರಿಗೂ ಗೊತ್ತಿರುವ ಹಾಗೇ ಈ ಪೊಸೆಸಿವ್ನೆಸ್ ಎಂಬುದು ಅಪರಿಚಿತ ಪದವೇನಲ್ಲ. ಹೆಚ್ಚಾಗಿ ಗಂಡು ಹೆಣ್ಣು , ಅದರಲ್ಲೂ ಈ ಪ್ರೀತಿ, ಪ್ರೇಮದ ಪ್ರಕರಣಗಳಲ್ಲಿ ಇದರ ಹಾಜರಿ ಹೆಚ್ಚು. ತನ್ನನ್ನು ಪ್ರೀತಿಸಿದ ಹುಡುಗನೋರ್ವ, ತನ್ನ ಆಪ್ತ ಸ್ನೇಹಿತೆಯೋ, ಅತ್ತೆಯ ಮಗಳೊಂದಿಗೆ ಮಾತನಾಡುವುದೋ, ಅಥವಾ ಸಲುಗೆಯಿಂದ ಇರುವುದನ್ನೂ ಸಹಿಸದ ಪ್ರಿಯತಮೆ, ಅವನೊಡನೆ ಜಗಳ ಕಾಯುತ್ತಾಳೆ. ಕೆಲವೊಮ್ಮೆ, ಹಿರಿಯರೇ ಗುರುತಿಸಿದ ವರನಿಗೆ, ಬೇರೆಲ್ಲೋ ಕ್ರಷ್ ಆಗಿದ್ದ ಕ್ಲೂ ಸಿಕ್ಕರೂ, ಸಂಬಂಧ ಹರಿದುಕೊಳ್ಳುವ ನಿರ್ಣಯಕ್ಕೆ ಹುಡುಗಿ ಬಂದ ಉದಾಹರಣೆಗಳೂ ಇಲ್ಲದಿಲ್ಲ.
ಈ ಪೊಸೆಸಿವ್ನೆಸ್ ಎಂಬುದೇ ಹಾಗೇ. ಯುವ ಪ್ರೇಮಿಗಳಷ್ಟೇ ಅಲ್ಲ, ಗೃಹಿಣಿಯರನ್ನೂ ಬಿಡದ ಆರೋಗ್ಯಕರ ರೋಗವಿದು. ಏಕೆಂದರೆ ಅದರರ್ಥವೇ ಹಕ್ಕು ಸ್ವಾಮ್ಯ. ತನ್ನ ವಸ್ತುವಿನ ಮೇಲಿರುವ ತನ್ನ ಹಕ್ಕು ಸ್ವಾಮ್ಯಕ್ಕೆ ಚ್ಯುತಿ ಬರುವ ಮುನ್ಸೂಚನೆ ದೊರಕಿದರೂ ಸಾಕು ಅದನ್ನು ಸಹಿಸುವ ಶಕ್ತಿ ಇರುವುದು ತೀರಾ ವಿರಳ. ಅಂತೆಯೇ ಇದು ಹೆಣ್ಣಿನಲ್ಲಿ ಹೆಚ್ಚು ಜಾಗೃತವಾಗಿರುತ್ತದೆ ಎಂದರೆ ತಪ್ಪೇನಿಲ್ಲ.
ಅದು ಪ್ರಕೃತಿ ಸಹಜ ಸ್ವಭಾವ. ದುಷ್ಟ ಗುಣವಲ್ಲ. ತನ್ನೊಂದಿಗೆ ಬಾಳ ಪಯಣ ನಡೆಸುವ ಇನಿಯನ ಮೇಲೆ ಸದಾ ಅವಳು ಹಕ್ಕು ಸ್ವಾಮ್ಯ ಹೊಂದಿರುವ ದ್ಯೋತಕ ಅಷ್ಟೇ. ಅದಕ್ಕೆ ಚ್ಯುತಿ ಬಂದ ಆದರೆ ನಾರಿ ಮುನಿದು ಮಾರಿಯಾದರೂ ಆಶ್ಚರ್ಯವಿಲ್ಲ. ಅದಕ್ಕೆಲ್ಲ… ತನ್ನ ಬದುಕನ್ನು ಹಂಚಿಕೊಳ್ಳಬೇಕಾದವನ ಮೇಲೆ ಅವಳಿಗಿರುವ ವಿಶೇಷ ಕಾಳಜಿ, ಪ್ರೀತಿಯ ಸ್ವಾರ್ಥವಲ್ಲದೇ ಬೇರಿನ್ನೇನೂ ಅಲ್ಲ.
ನಾವು ಗಮನಿಸಿದ ಅನೇಕ ಕೊಲೆ, ಆತ್ಮಹತ್ಯೆ, ವಿಚ್ಛೇದನ, ವೈಮನಸ್ಸಿನ ಪ್ರಕರಣಗಳಲ್ಲಿ ಅನೈತಿಕ ಸಂಬಂಧದ ವಾಸನೆ ಬಂದ ಉದಾಹರಣೆಗಳೇ ಸಾಕಷ್ಟು. ತನ್ನ ಪತಿ ಪರಸ್ತ್ರೀಯೊಂದಿಗೆ ಅಕ್ರಮವೋ ಅಥವಾ ಸಕ್ರಮದ ಮುಖವಾಡವೋ ಹಾಕಿಕೊಂಡು ಸಂಬಂಧವಿಟ್ಟುಕೊಂಡರೆ, ಅದ್ಯಾವ ಪತ್ನಿ ಸಹಿಸಲು ಸಾಧ್ಯ ಹೇಳಿ ?
ಸಹಿಸಿಕೊಂಡಿದ್ದರೆ ಅದು ಮುಸ್ಲಿಂ ಸಮುದಾಯದ ಮಹಿಳೆ ಎನ್ನಬಹುದೇನೋ. ಕುರಾನ್ನಲ್ಲೇ ಬಹುಪತ್ನಿತ್ವದ ಕುರಿತು ಪ್ರಸ್ತಾಪವಿದೆ. ಪುರುಷನಿಂದ ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಸಾಕಿ ಸಲಹುವ ಸಾಮರ್ಥ್ಯವಿದ್ದರೆ ಅದಕ್ಕೆ ಅವಕಾಶವಿದೆ ಎಂಬುದು ಗಮನಾರ್ಹ. ನಮ್ಮ ಸಾಂವಿಧಾನಿಕ ಕಾನೂನುಗಳು ಅವರ ಬಹುಪತ್ನಿತ್ವಕ್ಕೆ ಅಡ್ಡಿಪಡಿಸುವ ಗೋಜಿಗೆ ಹೋಗಿಲ್ಲ. ಇನ್ನು ಕುಟುಂಬ ಯೋಜನೆ ಅವರಿಗೆ ಅನ್ವಯವಾಗುವುದಿಲ್ಲ ಎಂಬುದರ ಹಿಂದಿನ ಹಿಡನ್ ಅಜೆಂಡಾಗಳು ಬಹು ಅಪಾಯಕಾರಿ ಬಿಡಿ.
ಪ್ರಶ್ನೆ ಅದಲ್ಲ. ಓರ್ವ ಪತ್ನಿಯೊಂದಿಗೆ ಅತಿ ಸಲುಗೆಯೊಂದಿಗೆ ಪತಿ ಇರುವಾಗಲೋ, ಅಥವಾ ಅವಳೊಂದಿಗಿನ ಇನ್ನಾವುದೋ ಖಾಸಗಿ ಸಂದರ್ಭಗಳಲ್ಲಿ, ಇನ್ನುಳಿದ ಮೂವರು ಪತ್ನಿಯರ ಮನಸ್ಥಿತಿ ಹೇಗಿರುತ್ತದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬನೇ ಒಡೆಯನನ್ನು ಹೊಂದುವುದು ಕಡ್ಡಾಯವಲ್ಲದಿದ್ದರೂ, ಹೊಂದಿದ ಹೆಣ್ಣು ಮಕ್ಕಳ ಮನಸ್ಥಿತಿಯ ಕುರಿತು ಅಯ್ಯೋ ಅನಿಸುತ್ತದೆ.
ಅವಳು ಮುಸ್ಲಿಂ ಮಹಿಳೆ ಸುಳ್ಳಲ್ಲ. ಮುಸ್ಲಿಂರ ಪವಿತ್ರ ಗ್ರಂಥದಲ್ಲಿ ಬಹುಪತ್ನಿತ್ವಕ್ಕೆ ಜೈ ಎಂದಿರಲೂಬಹುದು. ಬಹುಪತ್ನಿತ್ವ, ಅಸಂಖ್ಯ ಮಕ್ಕಳ ಹಕ್ಕು ಪಡೆದು ಬಹುಸಂಖ್ಯಾತರಿಗೆ ಸೆಡ್ಡು ಹೊಡೆಯುವ ರಾಜಕೀಯ ಪ್ರೇರಿತ ಹುನ್ನಾರ ಒತ್ತಟ್ಟಿಗಿರಲಿ. ಹಾಗೆಂದ ಮಾತ್ರಕ್ಕೆ ಸಾಮಾನ್ಯ ಮಹಿಳೆಯ ಸ್ವಭಾವ, ಪೊಸೆಸಿವ್ನೆಸ್, ಪ್ರೀತಿಯ ಸ್ವಾರ್ಥ, ಕಾಮನ್ ಜಲಸ್ ಮುಸ್ಲಿಂ ಮಹಿಳೆಯಲ್ಲಿ ಇರುವುದಿಲ್ಲ ಎಂದು ಹೇಳಲು ಸಾಧ್ಯವೇ ?
ಮನೋವೈದ್ಯರ ಅಭಿಪ್ರಾಯದ ಪ್ರಕಾರ, ಎಲ್ಲ ವರ್ಗದ ಮಹಿಳೆಯರಲ್ಲೂ ಒಂದಿಷ್ಟು ಸಾಮಾನ್ಯ ಗುಣ ಲಕ್ಷಣಗಳಿರುತ್ತವೆ. ಪೊಸೆಸಿವ್ನೆಸ್ ಎಂಬುದು ಧರ್ಮ ನಿರಪೇಕ್ಷ ಎಂಬುದನ್ನು ನಾವು ಗಮನಿಸಬೇಕಿದೆ. ಅಂದ ಮೇಲೆ, ಬಹುಪತ್ನಿತ್ವಕ್ಕೆ ಒಳಗಾದ ಮುಸ್ಲಿಂ ಮಹಿಳೆಯ ನೋವು, ಸಂಕಟ, ಅಳಲಿಗೆ ಬೆಲೆಯೇ ಇಲ್ಲವೇ ?
ತನಗೆ ಬೇಡವಾದದ್ದನ್ನು ಧಿಕ್ಕರಿಸುವ ಸ್ವಾತಂತ್ರ್ಯ ಅವಳಿಗೆ ಇಲ್ಲವೆಂದೇನಿಲ್ಲ, ಆದರೆ ಕೇಳಿಸಿಕೊಳ್ಳುವ ಕಿವಿಗಳೂ ಬೇಕಲ್ಲ ? ಬಹುಪತ್ನಿತ್ವಕ್ಕೆ ಒಳಗಾಗುವ ತವಕ ಮುಸ್ಲಿಂ ಮಹಿಳೆಯಲ್ಲಿ ಇರುತ್ತದೆ ಎಂದು ಅದ್ಯಾವ ವೈದ್ಯ ವಿeನವೂ ದೃಢಪಡಿಸಲು ಸಾಧ್ಯವಿಲ್ಲ. ಆದರೆ, ನಾವಿಲ್ಲಿ ಅರಿಯಬೇಕಿರುವುದು ಇಸ್ಲಾಂ ಸಮುದಾಯದಲ್ಲಿನ ಕಟ್ಟಾ ಧಾರ್ಮಿಕ ಸ್ವಾತಂತ್ರ್ಯದ ಅಮಲನ್ನು, ಮಾನವೀಯ ಸಂಬಂಧಗಳನ್ನು ಮೀರಿದ ಧರ್ಮಾಂಧತೆಯನ್ನು.
ಮುಸ್ಲಿಮರಲ್ಲಿ ಬಹುಪತ್ನಿತ್ವ ನಿಯಂತ್ರಿಸುವಂತೆ ಮತ್ತು ತಲಾಖ್ ಮೂಲಕ ವಿವಾಹ ವಿಚ್ಛೇದನ ದುರ್ಬಳಕೆ ತಡೆಗೆ ಕಾಯ್ದೆಯೊಂದನ್ನು ಜಾರಿಗೆ ತರಲು ಕೇರಳದ ಕಾನೂನು ಸುಧಾರಣಾ ಆಯೋಗ 2008ರಲ್ಲೇ ಮುಂದಾಗಿದ್ದು ಗಮನಾರ್ಹ.
ನ್ಯಾಯಾಂಗ ತಜ್ಞ ವಿ.ಆರ್.ಕೃಷ್ಣ ಅಯ್ಯರ್ ಅವರು, ಕೇರಳದಲ್ಲಿ ಏಕಪತ್ನಿತ್ವವು ಸಾಮಾನ್ಯ ಕಾನೂನು ಮತ್ತು ಬಹುಪತ್ನಿತ್ವವು ಒಂದು ಅಪವಾದ ಎಂಬ ಕಾನೂನು ಜಾರಿಗೆ ತರಲು ಸರ್ಕಾರಕ್ಕೆ ಸಲಹೆ ನೀಡಿದ್ದರು. ಕೇರಳ ಮುಸ್ಲಿಂ ವಿವಾಹ ಮತ್ತು ತಲಾಖ್ ಮೂಲಕ ವಿಚ್ಛೇದನ(ನಿಯಂತ್ರಣ) ಎಂಬ ಮಸೂದೆಯಲ್ಲಿ , ಬಹುಪತ್ನಿತ್ವ ಮತ್ತು ವಿಚ್ಛೇದನ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜೀಸಂಧಾನ ಸಲಹೆಗಳನ್ನು ಒದಗಿಸಲು ಸಲಹೆ ನೀಡಿತ್ತು.
ಮೊದಲ ವಿವಾಹ ಜಾರಿಯಲ್ಲಿ ಇರುವಾಗಲೇ ಯಾವುದೇ ಮುಸ್ಲಿಂ ಪುರುಷ ವಿವಾಹವಾದರೆ ಅವರು ಭಾರತೀಯ ದಂಡ ಸಂಹಿತೆ ಅನ್ವಯ ಬಹುಪತ್ನಿತ್ವ ಅಪರಾಧಕ್ಕೀಡಾಗುತ್ತಾರೆ ಮತ್ತು ಶಿಕ್ಷೆಗೆ ಅರ್ಹರು ಎಂದು ಕರಡು ಮಸೂದೆಯಲ್ಲಿ ಹೇಳಿದ್ದು ಗಮನಾರ್ಹ.
ಐತಿಹಾಸಿಕ ತೀರ್ಪು (1985) ಶಾಬಾನು ಮೊಕದ್ದಮೆಯಿಂದ ಆರಂಭಿಸಿ ಮುಸಲ್ಮಾನರ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಅನೇಕ ತೀರ್ಪುಗಳು ಹೊರಬಿದ್ದಿವೆ.
ಭಾರತದಲ್ಲಿ ಬಹುಪತ್ನಿತ್ವದ ಮೇಲಿನ ಕಾನೂನು ನಿಷ್ಕರುಣೆಯಿಂದ ಕೂಡಿದ ಕಾನೂನು ಎಂದರೆ ತಪ್ಪಿಲ್ಲ. ಇದು ಪುರುಷನಿಗೆ ತಾನು ಒಬ್ಬಳು ಪತ್ನಿಗಿಂತ ಹೆಚ್ಚಿನವರನ್ನು ನೋಡಿಕೊಳ್ಳಬ ಎಂಬುದನ್ನು ಸಾಬೀತುಪಡಿಸಬೇಕೆಂಬ ನಿಯಮವೇ ಇಲ್ಲ. ತೀರ ಬಡವನಾದ ವ್ಯಕ್ತಿಯೂ ಒಬ್ಬಳಿಗಿಂತ ಹೆಚ್ಚಿನ ಸಂಖ್ಯೆಯ ಪತ್ನಿಯರನ್ನು ಹೊಂದಬಹುದು.
ಮುಸಲ್ಮಾನ ಸಮುದಾಯವು ಪಾಲಿಸಿಕೊಂಡು ಬರುತ್ತಿರುವ ಬಹುಪತ್ನಿತ್ವ ಬಹುವಿವಾಹ ಪದ್ಧತಿಯು ಕಾನೂನುಬಾಹಿರ, ಅಸಾಂವಿಧಾನಿಕ ಎಂದು ವಾದಿಸಿದವರು ಇಲ್ಲವೆಂದೆಲ್ಲ. ಆದರೂ ನ್ಯಾಯಾಂಗದಲ್ಲಿ ಈ ವಾದಕ್ಕೆ ಇನ್ನೂ ಜಯ ಸಿಗುತ್ತಿಲ್ಲ ಎಂಬುದು ಗಂಭೀರ ಸಂಗತಿ.
ಏನೇ ಆಗಲಿ, ಹೆಂಡತಿಯೊಬ್ಬಳು ( ಹೆಂಡತಿಯರು ಅಲ್ಲ ) ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಎಂದ ಪ್ರೇಮ ಕವಿ ಕೆ.ಎಸ್.ಎನ್,
ಒಂದು ಗಂಡಿಗೊಂದು ಹೆಣ್ಣು,
ಹೇಗೋ ತಾನೆ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ದುಃಖ ಹಗುರ ಎನುತಿರೆ
ಪ್ರೇಮ ಎನಲು ಹಾಸ್ಯವೇ ? ಎಂದು ಪರೋಕ್ಷವಾಗಿ ಸರ್ವಮಾನ್ಯ ಏಕಪತ್ನಿ ವೃತವನ್ನೇ ಸಾರಿದ್ದಾರೆ.
ಪಾಪ, ಮುಸ್ಲಿಂ ಮಹಿಳೆಯರ ಕನಸುಗಳೇಕೆ ಕಮರಬೇಕು ? ಮಿಡಿಯುವ ಅವರ ಹೃದಯದ ಆರ್ತನಾದ ಅರಣ್ಯರೋದನವಾದರೆ ಸಹ್ಯವೇ ? ತನ್ನ ಹೃದಯದ ಅಂತಃಪುರದೊಳಗೆ ಮನದೊಡೆಯನೊಡನೆ ಮತ್ತಿಷ್ಟು ಹೃದಯಗಳ ಬೆಸುಗೆ ಕಂಡು ಅವಳ ಬದುಕು ಬೆಂದು ಹೋಗದೆ ? ಪುರುಷ ಪ್ರಧಾನ ಧರ್ಮದ ಮನೆಯಲ್ಲಿ ಸ್ತ್ರೀ ಬರೀ ತೊಟ್ಟಿಲು ತೂಗಿದರೆ ಸಾಕೇ ? ತೊಟ್ಟಿಲನ್ನು ತೂಗುವ ಕೈ ಜಗತ್ತನ್ನು ಆಳಬಲ್ಲದು ಎಂಬುದನ್ನು ನಿರೂಪಿಸುವಷ್ಟು ಕನಿಷ್ಟ ಸ್ವಾತಂತ್ರ್ಯ ಬೇಕಲ್ಲವೇ ?
ಇನ್ನಾದರೂ, ಸಮಾಜದ ಮುಖಂಡರು, ಮೌಲ್ವಿಗಳು, ತಜ್ಞರು, ಕಾನೂನು ಪರಿಣಿತರು, ವಿದ್ವಾಂಸರು, ಪಾಲಕರು, ಸಂಬಂಧಿಗಳು, ವಿಶೇಷವಾಗಿ ಮುಸ್ಲಿಂ ಮಹಿಳೆಯೇ ತನ್ನ ಮನದ ಇಂಗಿತವನ್ನು ಅಭಿವ್ಯಕ್ತಿಗೊಳಿಸಿದರೆ, ಚೂರಾಗುವ ಹೃದಯ ಮತ್ತೊಮ್ಮೆ ಮಿಡಿದು, ಜೀವಂತ ಬದುಕಲ್ಲಿ ಹೊಸ ಉತ್ಸಾಹಕ್ಕೆ ಮುನ್ನುಡಿ ಬರೆಯಬಹುದು.
ಇಸ್ಲಾಂ ಧರ್ಮ ಹೆಣ್ಣನ್ನು ದಾಸಿಯರಂತೆ ನಡೆಸಿಕೊಂಡಿದೆ. ಭಯೋತ್ಪಾದನೆ, ಜಿಹಾದ್, ಮದರಸಾ, ಗಲಭೆಗಳು ಮತ್ತು ಬಾಂಬ್ ಸ್ಫೋಟಗಳನ್ನು ಬಿಟ್ಟರೆ ಇಸ್ಲಾಮ ನಮಗೆ ಏನನ್ನೂ ಕೊಟ್ಟಿಲ್ಲ. ನಮಗೆ ಭವಿಷ್ಯ ಬೇಕೆಂದರೆ ಇಸ್ಲಾಂ ತ್ಯಜಿಸಬೇಕು. ಶಾಂತಿ ಮತ್ತು ಇಸ್ಲಾಂ ಯಾವತ್ತೂ ಒಂದಾಗಿರಲು ಸಾಧ್ಯವಿಲ್ಲ. ಇದು ಇಸ್ಲಾಂ ಧರ್ಮದವಳೇ ಆದ ಮಲಾಲಾಳ ಮನದ ಮಾತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.