ನವದೆಹಲಿ: ಭಾರತದಲ್ಲೂ ಇಸಿಸ್ ಉಗ್ರ ಸಂಘಟನೆಯ ಬೇರುಗಳು ಹರಡುತ್ತಿದ್ದು, ಈ ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನಗಳು ಭರದಿಂದ ಸಾಗುತ್ತಲೇ ಇದೆ. ಇದುವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 75 ಇಸಿಸ್ ಸಂಪರ್ಕ ಹೊಂದಿದವರನ್ನು ಬಂಧಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ
ಗೃಹಖಾತೆಯ ರಾಜ್ಯ ಸಚಿವ ಹಂಸರಾಜ್ ಅಹಿರ್ ಅವರು ರಾಜ್ಯಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ತನಿಖಾ ದಳ ಮತ್ತು ರಾಜ್ಯ ಪೊಲೀಸರು ಇದುವರೆಗೆ 75 ಶಂಕಿತ ಇಸಿಸ್ ಉಗ್ರರನ್ನು ಬಂಧಿಸಿದ್ದಾರೆ ಎಂದಿದ್ದಾರೆ.
75 ಜನರಲ್ಲಿ 21 ಮಂದಿ ಕೇರಳ, 16 ತೆಲಂಗಾಣ, 9 ಕರ್ನಾಟಕ, 8 ಮಹಾರಾಷ್ಟ್ರ, 6 ಮಧ್ಯಪ್ರದೇಶ, 4 ಉತ್ತರಾಖಂಡ, 3 ಉತ್ತರಪ್ರದೇಶ, 2 ರಾಜಸ್ಥಾನ, 4 ತಮಿಳುನಾಡು ಮತ್ತು ಜಮ್ಮು ಕಾಶ್ಮೀರ, ಪಶ್ಚಿಮಬಂಗಾಳದ ತಲಾ ಒಬ್ಬರು ಸೇರಿದ್ದಾರೆ.
ಯುವಕರನ್ನು ಪ್ರಚೋದಿಸಿ ಇಸಿಸ್ ಸಂಘಟನೆ ತನ್ನತ್ತ ಆಕರ್ಷಿಸಲು ಪ್ರಯತ್ನಿಸುತ್ತಿದ್ದು, ಅದರ ಸಂದೇಶಗಳಿಂದ ಕೆಲವರು ದಾರಿತಪ್ಪುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.