ಜಿನೆವಾ: ಅಲ್ಪಸಂಖ್ಯಾತರ ಬಗ್ಗೆ ಪಾಠ ಹೇಳಲು ಬಂದ ಪಾಕಿಸ್ಥಾನಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿಯೇ ಕನ್ನಡಿ ತೋರಿಸಿದೆ, ತನ್ನ ದೇಶದ ಅಲ್ಪಸಂಖ್ಯಾತರ ಸ್ಥಿತಿಗತಿಗಳನ್ನು ಮೊದಲು ಪರಾಮರ್ಶಿಸುವಂತೆ ಆ ದೇಶಕ್ಕೆ ತಿರುಗೇಟು ನೀಡಿದೆ.
ಪಾಕಿಸ್ಥಾನ ವಿಶ್ವ ಭಯೋತ್ಪಾದಕತೆಯ ಕಾರ್ಖಾನೆಯಾಗುತ್ತಿದೆ. ತನ್ನ ನೆಲದಲ್ಲಿನ ಹಿಂದೂ, ಕ್ರಿಶ್ಚಿಯನ್, ಶಿಯಾ, ಅಹಮದೀಯರು ಸೇರಿದಂತೆ ಇತರ ಅಲ್ಪಸಂಖ್ಯಾತರ ವಿರುದ್ಧ ದುವರ್ತನೆ ತೋರಿಸುವ ಮೂಲಕ ತನ್ನದೇ ನಾಗರಿಕರನ್ನು ಅದು ಕೆಳಮಟ್ಟಕ್ಕೆ ದೂಡಿದೆ ಎಂದು ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಸೆಷನ್ನಲ್ಲಿ ಭಾರತದ ಪ್ರತಿನಿಧಿ ಹೇಳಿದ್ದಾರೆ.
ನಮ್ಮ ದೇಶದ ಮುಸ್ಲಿಮರು ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಚಿವರು, ಬಾಲಿವುಡ್ ಸೂಪರ್ಸ್ಟಾರ್, ಸಿವಿಲ್ ಸರ್ವೆಂಟ್, ಕ್ರಿಕೆಟ್ ಕ್ಯಾಪ್ಟನ್ಗಳಾಗಿದ್ದಾರೆ. ಪಾಕ್ನಲ್ಲಿನ ಅಲ್ಪಸಂಖ್ಯಾತರು ಈ ಹುದ್ದೆಗಳ ನೆರಳಾದರು ಆಗಿದ್ದಾರೆಯೇ? ಅಲ್ಲಿನ ಅಲ್ಪಸಂಖ್ಯಾತರು ಕೇವಲ ಧರ್ಮನಿಂದನೆಯ ಕಾನೂನು, ಅವಮಾನ, ದೌರ್ಜನ್ಯ ಮತ್ತು ಮಾನವ ಹಕ್ಕು ಉಲ್ಲಂಘನೆಗಳನ್ನು ಪಡೆದುಕೊಂಡಿದ್ದಾರೆ ಎಂದು ಭಾರತ ಹೇಳಿದೆ.
ಈ ಮೂಲಕ ವಿಶ್ವಸಂಸ್ಥೆಯಲ್ಲಿ ಭಾರತದ ಮುಸ್ಲಿಮರ ಸ್ಥಿತಿಗತಿಗಳ ಬಗ್ಗೆ ಪ್ರಸ್ತಾಪಿಸಿದ್ದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವನ್ನು ಉಂಟುಮಾಡಿದೆ. ಅಲ್ಲದೇ ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿ, ಅದರ ಆಂತರಿಕ ವಿಷಯವನ್ನು ಕೆದಕುವ ಮೂಲಕ ಪಾಕಿಸ್ಥಾನ ವಿಶ್ವಸಂಸ್ಥೆಯ ಮಂಡಳಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.