ನವದೆಹಲಿ: ಉತ್ತರಪ್ರದೇಶ, ಉತ್ತರಾಖಂಡದಲ್ಲಿ ವಿಜಯಲಕ್ಷ್ಮೀ ಬಿಜೆಪಿಗೆ ಒಲಿದಿರುವ ಕಾರಣ ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ಸಿಗುವ ಭರವಸೆ ಮೂಡಿದೆ.
ಗಂಗೆ ಹರಿಯುವ ಐದು ರಾಜ್ಯಗಳ ಪೈಕಿ ಪ್ರಮುಖವಾದ 3 ರಾಜ್ಯಗಳು ಇದೀಗ ಬಿಜೆಪಿಯ ಆಡಳಿತಕ್ಕೆ ಒಳಪಟ್ಟಿದೆ. ಹೀಗಾಗೀ ನಮಾಮೀ ಗಂಗೆ ಯೋಜನೆಯ ರೂಪುರೇಶೆಗಳನ್ನು ಅನುಷ್ಠಾನಕ್ಕೆ ತರುವುದು ಕೇಂದ್ರಕ್ಕೆ ಮತ್ತಷ್ಟು ಸರಳವಾಗಿದೆ. ರಾಜ್ಯ ಮತ್ತು ಕೇಂದ್ರದ ಸಹಕಾರದೊಂದಿಗೆ ಗಂಗೆ ಶುದ್ಧೀಕರಣದ ಯೋಜನೆಗಳು ವೇಗ ಪಡೆಯಬಹುದೆಂಬ ನಿರೀಕ್ಷೆಗಳು ಹುಟ್ಟಿಕೊಂಡಿದೆ.
2015ರ ಮೇನಲ್ಲಿ ಸರ್ಕಾರ ನಮಾಮಿ ಗಂಗೆ ಯೋಜನೆಗೆ ಚಾಲನೆ ನೀಡಿದ್ದು, ಗಂಗಾ ನದಿಯನ್ನು ಶುದ್ಧ ಮಾಡುವ ಮತ್ತು ಸಂರಕ್ಷಿಸುವ ಮಹತ್ವದ ಉದ್ದೇಶವನ್ನು ಇದು ಒಳಗೊಂಡಿದೆ. 5 ವರ್ಷಗಳಿಗಾಗಿ (2015-20) 20 ಸಾವಿರ ಕೋಟಿ ಬಜೆಟ್ನ್ನು ಇಡಲಾಗಿದೆ.
ಗಂಗೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸಲು ನೀರು ತಡೆಯಿಲ್ಲದಂತೆ ಹರಿಯುವುದು ಅಗತ್ಯವಾಗಿದೆ ಆದರೆ ಗಂಗಾ ನದಿಗೆ ಡ್ಯಾಂ ಕಟ್ಟಲು ಬಯಸಿದ್ದ ಉತ್ತರಾಖಂಡದ ಕಾಂಗ್ರೆಸ್ ಸರ್ಕಾರ ಇದಕ್ಕೆ ವಿರೋಧಿಸಿತ್ತು. ಹೀಗಾಗೀ ಗಂಗೆಯ ಸ್ವಚ್ಛತೆಗೆ ಅಡೆತಡೆಗಳು ಉಂಟಾಗಿದ್ದವು.
ಇದೀಗ ಗಂಗೆ ಉಗಮಗೊಳ್ಳುವ ಉತ್ತರಾಖಂಡ ಬಿಜೆಪಿಗೆ ಒಲಿದ ಕಾರಣ ಯಾವುದೇ ಅಡೆತಡೆ ಇಲ್ಲದೇ ಎಲ್ಲಾ ಮಧ್ಯಸ್ಥಗಾರರನ್ನು ಒಗ್ಗೂಡಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಕೇಂದ್ರಕ್ಕೆ ಸುಲಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.