ಮಂಗಳೂರು : ಭಾರತೀಯ ಜನತಾ ಪಾರ್ಟಿ ಪಂಡಿತ್ ದೀನದಯಾಳ್ರ ಜನ್ಮಶತಾಬ್ಧಿಯ ಪ್ರಯುಕ್ತ ರಾಷ್ಟ್ರವ್ಯಾಪ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು,ಇದರ ಪ್ರಯುಕ್ತ ದ.ಕ ಹಾಗೂ ಉಡುಪಿ ಜಿಲ್ಲೆಯ ಜಂಟಿ ಸಭೆ ದಿನಾಂಕ 12-03-2017 ರಂದು ಪುತ್ತೂರಿನ ಒಕ್ಕಲಿಗ ಸಭಾಭವನದಲ್ಲಿ ಜರಗಿತು.
ಉಭಯ ಜಿಲ್ಲೆಗಳ ಜಿಲ್ಲಾ ಮಟ್ಟದ ಪ್ರಮುಖರ ಮೇಲ್ಪಟ್ಟು ಹಾಗೂ ವಿಧಾನಸಭಾ ಕ್ಷೇತ್ರ ಶಹ ಪಂಡಿತ್ ದೀನದಯಾಳ್ ಜನ್ಮಶತಾಬ್ಧಿ ಕಾರ್ಯಯೋಜನಾ ಸಮಿತಿಯ ಸದಸ್ಯರು ಅಪೇಕ್ಷಿತರಿದ್ದರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ರವರು ಸಭೆಯನ್ನು ಉದ್ಧಾಟಿಸಿ, ಉತ್ತರಪ್ರದೇಶ ಸೇರಿದಂತೆ ಇತ್ತೀಚೆಗೆ ಹೊರಬಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಈ ದೇಶದ ಜನ ಬಿಜೆಪಿಯ ಪರ ನಿಂತಿರುವುದು ಸ್ಪಷ್ಟವಾಗಿ ಸೂಚಿಸುವುದು ಮಾತ್ರವಲ್ಲದೆ, ಇದು ಮುಂದಿನ ರಾಷ್ಟ್ರರಾಜಕಾರಣಕ್ಕೆ ದಿಕ್ಸೂಚಿಯಾಗಿದೆ ಎಂದರು. ಕರ್ನಾಟಕದಲ್ಲಿಯೂ ಬಿಜೆಪಿ 150 ಕ್ಕಿಂತ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವುದು ಮಾತ್ರವಲ್ಲದೆ ಉಡುಪಿ- ದ.ಕ ಜಿಲ್ಲೆಗಳ 13 ಕ್ಷೇತ್ರಗಳಲ್ಲಿಯೂ ಜನರು ಬಿಜೆಪಿಯನ್ನು ಆರ್ಶೀವದಿಸಲಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಸಿಸಬೇಕು ಎಂಬ ಕರೆಯನ್ನು ಕೊಟ್ಟರು. ಮಂಗಳೂರು ವಿಭಾಗದ ಭಾಜಪ ಸಹ ಪ್ರಭಾರಿಯಾಗಿರುವ ಶ್ರೀಪ್ರತಾಪ್ ಸಿಂಹ ನಾಯಕರು ಪಂಡಿತ್ ದೀನ್ ದಯಾಳ್ರ ಜೀವನ ಹಾಗೂ ಅವರು ಪ್ರತಿಪಾದಿಸಿದ ಏಕಾತ್ಮ ಮಾನವತಾವಾದ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ಆದರ್ಶವಾಗಿರಬೇಕು ಎಂದು ಭೋದಿಸಿದರು.
ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಅರುಣ್ ಕುಮಾರ್ರವರು ಉಭಯ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾಗಿರುವ ಯೋಜನೆಗಳ ಬಗ್ಗೆ ಸುವಿಸ್ತಾರವಾದ ಮಾಹಿತಿಯನ್ನು ಕೊಟ್ಟರು. ಮಂಗಳೂರು ವಿಭಾಗದ ಬುಜೆಪಿ ಪ್ರಭಾರಿ ಶ್ರೀ ಉದಯ ಕುಮಾರ್ ಶೆಟ್ಟಿ ಸಮರೋಪ ಭಾಷಣದಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ಹಾಗೂ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಪ್ರಸ್ತಾಪಿಸಿ, ಇದನ್ನು ಮತದಾರರಲ್ಲಿ ಮನವರಿಕೆ ಮಾಡುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು. ದ.ಕ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಸ್ವಾಗತಿಸಿದರು ಹಾಗೂ ಶ್ರೀಮತಿ ಶಾರದ ರೈ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಬಿಜೆಪಿ ವಕ್ತಾರ ಶ್ರೀ ವಿಕಾಸ್ ಪುತ್ತೂರು ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.