ಕಾರ್ಕಳ : 2011ರ ಜನಗಣತಿಯ ಆಧಾರದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿರುವುದರಿಂದ ಕಾರ್ಕಳ ತಾಲೂಕಿನಲ್ಲಿ ಈ ಬಾರಿ ಗ್ರಾ.ಪಂ.ಸದಸ್ಯರ ಸ್ಥಾನಗಳು ಹೆಚ್ಚಳ ಕಂಡಿದೆ. 2010ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 29 ಗ್ರಾ.ಪಂ.ಗಳಲ್ಲಿ 465 ಸದಸ್ಯರಿದ್ದರೆ, ಪ್ರಸಕ್ತ ಸಾಲಿನಲ್ಲಿ 27 ಸದಸ್ಯ ಸ್ಥಾನ ಹೆಚ್ಚಿದ್ದು, ಒಟ್ಟು ಸದಸ್ಯ ಬಲ 492ಕ್ಕೆ ಏರಿದೆ. ಅಲ್ಲದೆ ತಾಲೂಕಿನಲ್ಲಿದ್ದ 29 ಗ್ರಾ.ಪಂ.ಗಳ ಸಂಖ್ಯೆ 34 ಕ್ಕೇರಿದ್ದು, ಒಟ್ಟು ಐದು ಗ್ರಾಮ ಪಂಚಾಯಿತಿಗಳು ಹೊಸದಾಗಿ ರೂಪುಗೊಂಡಿದೆ. ಚಾರ, ಕೆರ್ವಾಶೆ, ನಂದಳಿಕೆ, ಇರ್ವತ್ತೂರು ಮತ್ತು ಕಲ್ಯಾ ಹೊಸ ಪಂಚಾಯಿತಿಯಾಗಿ ಉದಯಗೊಂಡಿದೆ.
ಕುಚ್ಚೂರು-ಬೇಳಂಜೆ ಒಳಗೊಂಡ ಕುಚ್ಚೂರು ಗ್ರಾ.ಪಂ.ನಲ್ಲಿ ಈ ಹಿಂದೆ ೧೦ ಸದಸ್ಯ ಬಲವಿತ್ತು. ಪ್ರಸ್ತುತ 1 ಸದಸ್ಯ ಸ್ಥಾನ ಹೆಚ್ಚಳ ಕಂಡಿದ್ದು, ಒಟ್ಟು ಸಂಖ್ಯೆ 11ಕ್ಕೇರಿದೆ. ಚಾರ ಮತ್ತು ಹೆಬ್ರಿ ಗ್ರಾಮವನ್ನೊಳಗೊಂಡ ಹೆಬ್ರಿ ಪಂಚಾಯಿತಿಯಲ್ಲಿ ಈ ಹಿಂದೆ 26 ಸದಸ್ಯ ಬಲವಿತ್ತು. ಪ್ರಸ್ತುತ ಹೆಬ್ರಿಯಿಂದ ಚಾರ ಬೇರ್ಪಟ್ಟ ಹಿನ್ನೆಲೆಯಲ್ಲಿ ಚಾರ ಗ್ರಾಮದಲ್ಲಿ ಈ ಹಿಂದೆ 12 ಮಂದಿಯಿದ್ದ ಸದಸ್ಯ ಬಲ 13 ರಕ್ಕೇರಿದೆ. ಅಲ್ಲದೆ ಹೆಬ್ರಿ ಗ್ರಾಮ ವ್ಯಾಪ್ತಿಯಲ್ಲಿದ್ದ 14ಸ್ಥಾನಗಳ ಪೈಕಿ ೨ ಸ್ಥಾನ ಹೆಚ್ಚಳವಾಗಿ ಒಟ್ಟು ೧೬ ಸದಸ್ಯರನ್ನು ಆ ಗ್ರಾ.ಪಂ.ಹೊಂದಿದೆ.
ಶಿವಪುರ ಗ್ರಾ.ಪಂ.ನಲ್ಲಿ ಈ ಹಿಂದೆ 12 ಸ್ಥಾನಗಳಿದ್ದು, ಪ್ರಸ್ತುತ 13ಕ್ಕೇರಿದೆ. ಮುದ್ರಾಡಿ ಪಂಚಾಯಿತಿನಲ್ಲಿ 14ಸ್ಥಾನವಿದ್ದು, ಪ್ರಸ್ತುತ ಅದು ಕೂಡಾ 15ಕ್ಕೇರಿದೆ. ಮರ್ಣೆ ಹಾಗೂ ಹೆರ್ಮುಂಡೆ ಗ್ರಾಮವನ್ನೊಳಗೊಂಡ ಮರ್ಣೆ ಪಂಚಾಯಿತಿಯಲ್ಲಿ ಹಿಂದೆ 22 ಸ್ಥಾನಗಳಿದ್ದರೆ ಈಗ 2 ಸ್ಥಾನ ಹೆಚ್ಚಳವಾಗಿ ಒಟ್ಟು 24 ಸದಸ್ಯ ಬಲ ಹೊಂದಿದೆ. ಹಿರ್ಗಾನ ಪಂಚಾಯಿತಿಯಲ್ಲಿ 12 ಸ್ಥಾನವಿದ್ದು, ಅದು ಕೂಡಾ 13ಕ್ಕೇರಿದೆ. ಜಾರ್ಕಳ, ಶಿರ್ಲಾಲು, ಕೆರ್ವಾಶೆ ಗ್ರಾಮಗಳನ್ನು ಹೊಂದಿದ್ದ ಶಿರ್ಲಾಲು ಪಂಚಾಯಿತಿಯಿಂದ ಕೆರ್ವಾಶೆ ಗ್ರಾಮ ಬೇರ್ಪಟ್ಟಿದ್ದು, ಪ್ರತ್ಯೇಕ ಗ್ರಾ.ಪಂ.ಆಗಿದೆ. ಹಿಂದೆ ಕೆರ್ವಾಶೆ ಗ್ರಾಮದಲ್ಲಿ ೭ ಮಂದಿ ಸದಸ್ಯರಿದ್ದರೆ ಈಗ ಹೊಸದಾಗಿ ರಚನೆಯಾಗಿರುವ ಪಂಚಾಯಿತಿಯಲ್ಲಿ ಒಂದು ಸ್ಥಾನ ಹೆಚ್ಚಳವಾಗಿ ಒಟ್ಟು ಸದಸ್ಯರ ಸಂಖ್ಯೆ ೮ಕ್ಕೇರಿದೆ. ಜಾರ್ಕಳ, ಶಿರ್ಲಾಲು ಗ್ರಾಮವನ್ನೊಳಗೊಂಡ ಶಿರ್ಲಾಲು ಪಂಚಾಯಿತಿಯಲ್ಲಿ ಈ ಹಿಂದೆ ಇದ್ದ ೮ ಸದಸ್ಯರ ಬಲ ಯಥಾಸ್ಥಿತಿಯಲ್ಲಿದೆ. ಮಾಳ ಮತ್ತು ಮುಡಾರಿನಲ್ಲೂ ಈ ಹಿಂದೆಯಿದ್ದ ಸದಸ್ಯ ಸ್ಥಾನಕ್ಕಿಂತ ಒಂದು ಸ್ಥಾನ ಹೆಚ್ಚಳ ಕಂಡಿದ್ದು, ಮಾಳ ೧೫ ಹಾಗೂ ಮುಡಾರು ಗ್ರಾ.ಪಂ.೧೬ ಸದಸ್ಯ ಬಲ ಹೊಂದಿದ ಗ್ರಾ.ಪಂ.ಆಗಿ ರೂಪುಗೊಂಡಿದೆ.
ಕುಕ್ಕುಂದೂರು ಗ್ರಾ.ಪಂ.ನಲ್ಲಿ ಈ ಹಿಂದೆ 30 ಸ್ಥಾನಗಳಿದ್ದು, ಪ್ರಸ್ತುತ 3 ಸ್ಥಾನ ಹೆಚ್ಚಳವಾಗಿ ಒಟ್ಟು ೩೩ ಸದಸ್ಯ ಬಲ ಹೊಂದಿದ ಅತೀ ಹೆಚ್ಚು ಸದಸ್ಯರನ್ನೊಳಗೊಂಡ ಗ್ರಾ.ಪಂ.ಆಗಿ ಕಾರ್ಕಳ ತಾಲೂಕಿನಲ್ಲಿ ಗುರುತಿಸಲ್ಪಟ್ಟಿದೆ.
ಪಳ್ಳಿ, ನಿಂಜೂರು, ಕಲ್ಯಾ ಗ್ರಾಮಗಳನ್ನು ಒಳಗೊಂಡ ಪಳ್ಳಿ ಪಂಚಾಯಿತಿಯಿಂದ ಕಲ್ಯಾ ಬೇರ್ಪಟ್ಟು ಪ್ರತ್ಯೇಕ ಪಂಚಾಯಿತಿ ಆಗಿದೆ. ಕಲ್ಯಾದಲ್ಲಿ ಈ ಹಿಂದೆ 9 ಸದಸ್ಯರಿದ್ದು, ಪ್ರಸ್ತುತ 1 ಸ್ಥಾನ ಏರಿಕೆಯಾಗುವ ಮೂಲಕ ಅಲ್ಲಿ 10 ಸದಸ್ಯ ಬಲ ಹೊಂದಿದೆ. ಪಳ್ಳಿ, ನಿಂಜೂರು ಸೇರಿದಂತೆ ೨ ಗ್ರಾಮಗಳಲ್ಲಿ ಈ ಹಿಂದೆ 14 ಸ್ಥಾನವಿದ್ದರೆ, ಅಲ್ಲೂ 1ಸ್ಥಾನ ಏರಿಕೆಯಾಗಿದ್ದು, ಒಟ್ಟು ಸದಸ್ಯರ ಸಂಖ್ಯೆ 15ಕ್ಕೇರಿದೆ. ನಿಟ್ಟೆ ಗ್ರಾ.ಪಂ.ನಲ್ಲಿ ಈ ಹಿಂದೆ 29 ಸ್ಥಾನಗಳಿದ್ದು, ಅಲ್ಲೂ ಎರಡು ಸ್ಥಾನಗಳು ಏರಿಕೆಯಾಗುವ ಮೂಲಕ ಒಟ್ಟು 31 ಸದಸ್ಯ ಬಲವನ್ನು ಆ ಗ್ರಾ.ಪಂ. ಹೊಂದುವ ಮೂಲಕ ತಾಲೂಕಿನಲ್ಲಿ ಅತೀ ಹೆಚ್ಚು ಸದಸ್ಯತನ ಎರಡನೇ ಸ್ಥಾನದಲ್ಲಿದೆ. ಕ್ಕೇರಿದೆ. ಸಾಣೂರು ಗ್ರಾ.ಪಂ.ನಲ್ಲಿ 2 ಸ್ಥಾನ ಅಧಿಕವಾಗಿ 18, ಮಿಯ್ಯಾರು ಗ್ರಾ.ಪಂ.ನಲ್ಲಿ 2 ಸ್ಥಾನ ಹೆಚ್ಚಳವಾಗಿ 19, 18 ಸದಸ್ಯ ಬಲ ಹೊಂದಿದ್ದ ಈದು ನೂರಾಳ್‌ಬೆಟ್ಟು ವ್ಯಾಪ್ತಿ ಹೊಂದಿರುವ ಈದು ಪಂಚಾಯಿತಿಯ ಒಟ್ಟು ಸ್ಥಾನ 19ಕ್ಕೇರಿದೆ. ರೆಂಜಾಳ ಮತ್ತು ಇರ್ವತ್ತೂರು ಗ್ರಾಮಗಳು ಸೇರಿದ್ದ ರೆಂಜಾಳ ಪಂಚಾಯಿತಿಯಿಂದ ಇರ್ವತ್ತೂರು ಬೇರ್ಪಡೆಗೊಂಡು ಪ್ರತ್ಯೇಕ ಪಂಚಾಯಿತಿ ಆಗಿ ಮಾರ್ಪಟ್ಟಿರುವುದರಿಂದ ಇರ್ವತ್ತೂರಿನಲ್ಲಿದ್ದ 7 ಸ್ಥಾನಗಳ ಹೊಸ ಪಂಚಾಯಿತಿಯಾಗಿ ಉದಯವಾಗಿದೆ. ರೆಂಜಾಳ ಗ್ರಾಮವನ್ನು ಮಾತ್ರ ಹೊಂದಿದ್ದ ರೆಂಜಾಳ ಪಂಚಾಯಿತಿಯಲ್ಲಿ 1 ಸ್ಥಾನ ಹೆಚ್ಚಳವಾಗಿ ಒಟ್ಟು 8 ಸ್ಥಾನ ಹೊಂದಿದೆ. ಬೋಳ ಪಂಚಾಯಿತಿಯು ಕೆದಿಂಜೆ ಮತ್ತು ಬೋಳ ಗ್ರಾಮವನ್ನೊಳಗೊಂಡಿದ್ದು, ಒಟ್ಟು 12 ಸದಸ್ಯ ಬಲ ಹೊಂದಿತ್ತು. ಈಗ ಕೆದಿಂಜೆ ಗ್ರಾಮದಲ್ಲಿ ಹೊಸದಾಗಿ ರಚನೆಯಾದ ನಂದಳಿಕೆ ಸೇರ್ಪಡೆಗೊಂಡಿವುದರಿಂದ ಬೋಳ ಗ್ರಾಮದಲ್ಲಿದ್ದ ೧೦ ಸ್ಥಾನಗಳು ಯಥಾಸ್ಥಿತಿಯಲ್ಲಿ ಉಳಿದುಕೊಂಡಿದೆ.
ಹೊಸದಾಗಿ ರಚನೆಗೊಂಡ ನಂದಳಿಕೆ ಪಂಚಾಯಿತಿ ವ್ಯಾಪ್ತಿಗೆ ನಂದಳಿಕೆ ಹಾಗೂ ಕೆದಿಂಜೆ ಗ್ರಾಮ ಸೇರಿದಂತೆ 12 ಸದಸ್ಯ ಸ್ಥಾನವಿದೆ. ಹಿಂದೆ ನಂದಳಿಕೆಯಲ್ಲಿ 9, ಕೆದಿಂಜೆಯಲ್ಲಿ 2 ಸ್ಥಾನಗಳಿದ್ದರೆ, ಪ್ರಸ್ತುತ ಒಂದು ಸ್ಥಾನ ಏರಿಕೆಯಾಗಿದೆ. ಸೂಡಾ, ಬೆಳ್ಮಣ್ಣು ಒಳಗೊಂಡ ಬೆಳ್ಮಣ್ಣು ಪಂಚಾಯಿತಿಯಲ್ಲಿ 18 ಸದಸ್ಯ ಒಟ್ಟು ಸ್ಥಾನವಿದ್ದು, ಈ ಹಿಂದೆ ಬೆಳ್ಮಣ್ಣಿನಲ್ಲಿ 11, ಸೂಡಾದಲ್ಲಿ 5 ಸ್ಥಾನಗಳಿದ್ದವು. ಈ ಎರಡು ಗ್ರಾಮಗಳಲ್ಲಿ ಒಟ್ಟು ೨ ಸ್ಥಾನ ಏರಿಕೆಯಾಗಿದೆ.
ಸ್ಥಾನ ಇಳಿಕೆ : ಮುಂಡ್ಕೂರು ಪಂಚಾಯಿತಿಯಲ್ಲಿ ಹಿಂದೆ 19 ಸ್ಥಾನಗಳಿತ್ತು. ಪ್ರಸ್ತುತ ಅವುಗಳ ಪೈಕಿ ಒಂದು ಕುಸಿದಿದ್ದು, ಒಟ್ಟು ಸದಸ್ಯರ ಬಲ ಈಗ 18ಕ್ಕೇ ಇಳಿದಿದೆ. ಹಿಂದಿನ 19 ಸದಸ್ಯ ಬಲದಲ್ಲಿ ಮುಂಡ್ಕೂರಿನಲ್ಲಿ 15 ಹಾಗೂ ಮುಲ್ಲಡ್ಕದಲ್ಲಿ 4ಸ್ಥಾನಗಳಿದ್ದವು. ನಾಡ್ಪಾಲು, ವರಂಗ, ಕಡ್ತಲ, ದುರ್ಗ, ಎರ್ಲಪಾಡಿ, ಬೈಲೂರು, ನೀರೆ, ನಲ್ಲೂರು, ಕಾಂತಾವರ, ಇನ್ನಾ ಗ್ರಾ.ಪಂ.ನ ಸದಸ್ಯ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಗ್ರಾ.ಪಂ.ಸದಸ್ಯ ಬಲ : ತಾಲೂಕಿನ 34 ಗ್ರಾ.ಪಂ.ಗಳು ಒಟ್ಟು 482 ಸದಸ್ಯಬಲವನ್ನು ಹೊಂದಿದೆ. ಕುಕ್ಕುಂದೂರು ಗ್ರಾ.ಪಂ. ಅತೀ ಹೆಚ್ಚು ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಯಾಗಿದ್ದರೆ, ಇರ್ವತ್ತೂರು ಮತ್ತು ನಾಡ್ಪಾಲು ಅತೀ ಕಡಿಮೆ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಯಾಗಿದೆ.
ಕುಚ್ಚೂರು-11, ನಾಡ್ಪಾಲು-7, ಶಿವಪುರ-13, ಮುದ್ರಾಡಿ-15, ವರಂಗ-18, ಕಡ್ತಲ-14, ಮರ್ಣೆ-24, ಹಿರ್ಗಾನ-13, ಮಾಳ-15, ಮಡಾರು-16, ದುರ್ಗ-9, ಕುಕ್ಕುಂದೂರು-33, ಎರ್ಲಪ್ಪಾಡಿ-12, ಬೈಲೂರು-14, ನೀರೆ-15, ನಿಟ್ಟೆ-31, ಸಾಣೂರು-18, ಮಿಯಾರು-19, ನಲ್ಲೂರು-15, ಈದು-19, ಕಾಂತಾವರ-9, ಇನ್ನಾ-9, ಮುಂಡ್ಕೂರು-18, ಹೆಬ್ರಿ-16, ಚಾರ-13, ಶಿರ್ಲಾಲು-8, ಕೆರ್ವಾಶೆ-8, ಪಳ್ಳಿ-15, ಕಲ್ಯಾ-10, ರೆಂಜಾಳ-8, ಇರ್ವತ್ತೂರು-7, ಬೋಳ-10, ನಂದಳಿಕೆ-12, ಬೆಳ್ಮಣ್ಣು-18.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.