ಧಾರವಾಡ: ಜೀವನ ಒಂದು ಅರಣ್ಯ. ಇಂತಹ ಘೋರ ಕಾನನ ದಾಟಲು ಬತ್ತಿ, ಎಣ್ಣೆ ಒಳಗೊಂಡು ಹೊತ್ತಿದ ದೀವಟಿಗೆ ಬೇಕು. ಆದರೆ, ಬತ್ತಿ, ಎಣ್ಣೆ ಮುಗಿದು ದೀವಟಿಗೆ ಆರುವುದರೊಳಗೆ ಜೀವನ ಅರಣ್ಯ ದಾಟುವುದರೊಳಗೆ ಮನುಷ್ಯನ ಭಾವ ಕೆಟ್ಟು ಅರಣ್ಯದಲ್ಲಿ ಬದುಕು ಮರೆಯಾಗುತ್ತಿದೆ.
ಜೀವನ ದೀವಟಿಗೆ ನಂದಿ ಹೋಗುವ ಮುನ್ನವೇ ಜೀವನ ಅರಣ್ಯ ಸಂತೋಷ, ಶಾಂತಿ, ಸಮಾದಾನ, ನಮ್ಮೆದಿಯ ಸಮೃದ್ಧಿ ಸಿಗಲಿದೆ. ಇದಕ್ಕೆ ಸದ್ಭಾವ ಸಾಧನೆ ಮುಖ್ಯ. ಸತ್ಯ-ಶಾಂತಿ ತುಂಬಿದ ಬದುಕು ಸತ್ಪೂರ್ಣಗೊಂಡು ಬದುಕಿನ ವೈಭವ ಹೆಚ್ಚಿಸುತ್ತದೆ. ಆದರೆ, ಆಸೆ-ವ್ಯಾಮೋಹ ಭಾವದ ವೈರಿಗಳು.
ಜಗತ್ತಿನಲ್ಲಿ ಆಗೋಮ್ಮೆ-ಈಗೋಮ್ಮೆ ಸಾಧು-ಸಂತರು-ಶರಣರು ಜನಿಸಿ ಇಂಥ ದೀವಟಿಗೆ ನೀಡುವ ಮೂಲಕ ಸರಿಯಾಗ ಮಾಗದಲ್ಲಿ ನಡೆಸುತ್ತಾರೆ. ಆದರೆ, ಆಸೆ-ಮೋಹ ಭಾವ ಕೆಡಿಸುವ ಮೂಲಕ ಅಡ್ಡದಾರಿ ಹಿಡಿಸುತ್ತವೆ. ಇವುಗಳ ಮನುಷ್ಯನ ಮನಸ್ಸಿನಲ್ಲಿ ಸುಳಿಯದಂತೆ ನೋಡಿಕೊಳ್ಳಬೇಕು.
ಹೂವಿಗು ನಾನು ಅರಳಬೇಕು. ಸುಗಂಧ ಎಲ್ಲಡೆ ಎಂಬ ಆಸೆ ಇದೆ. ಅಂತೆಯೇ ಮನುಷ್ಯ ಪವಿತ್ರ ಪ್ರೇಮ, ಸಂತೋಷದ ಸೌರಭ ಹರಡುವ ಆಸೆ ಇರಲಿ. ಹೆಚ್ಚು-ಕಡಿಮೆ ಇರದೆ, ಸಮಪ್ರಮಾಣದಲ್ಲಿ ಇರಲಿ. ಭಾವ ಕಲ್ಮಶದಿಂದ ಬದುಕಿನ ವಿನಾಶ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.
ಬುದಕಿಗೆ ಎಲ್ಲವೂ ಬೇಕು. ಅತಿಯಾಸೆ ಹಾಗೂ ಆಸೆ ರಹಿತ ಜೀವನ ಬದುಕಲ್ಲ. ಆದರೆ, ಎಲ್ಲವೂ ಹಿತ-ಮಿತ ಇರಬೇಕು. ಈ ಹಿಂದೆ ನಾನದೇ ಯೋನಿಯಲ್ಲಿ ಬಂದೇನೆಂಬ ಕಲ್ಪನೆ ಮರೆತ ಮಾನವ ಮೋಹಕ್ಕೆ ಒಳಗಾಗಿದ್ದಾನೆ. ಎಷ್ಟಿರಬೇಕು ಅಷ್ಟಿದ್ರ ಬದುಕು ಹೂವಿನ ಹಂದರ. ಇಲ್ಲಾಂದ್ರ ವಿರಸ.
ಜೀವನ ಗೆಲ್ಲಲು ಭಾವ ಶುದ್ಧ ಇರಬೇಕು. ಶಾಂತಿ, ಸಮಾದಾನ, ಸತ್ಯದ ದರ್ಶನ ಮಾಡಿಕೊಳ್ಳಿರಿ. ಅತಿಯಾಸೆ-ವ್ಯಾಮೋಹ ಬಿಟ್ಟಾಗ ಜೀವನ ಸಿಂಗಾರಗೊಳ್ಳಲಿದೆ. ಜಗತ್ತು ಸುಂದರ ಕಾಣಲಿದೆ. ಈ ಜಗತ್ತಿಗೆ ನಾನೇತಕ್ಕೆ ಬಂದೆನೆಂಬ ಕಲ್ಪನೆ ಇರಲಿ. ಮೋಹ, ಮತ್ಸರ, ಕಾಮ, ಕ್ರೋಧ ಬಿಡಬೇಕು.
ಇಂದಿಂಗೆ ಎಂಥ, ನಾಳೆಂಗೆ ಎಂಥ, ಬೆಂದ ಒಡಲ ಹೋಯಿತು (ಸಂಸಾರ) ನಾನೀನ ಕೊಂದಯ್ಯ ಎಂಬ ಬಸಣ್ಣವವರ ಮಾತು ಅದ್ಭತು. ಬೆಂದ ಒಡಲ(ಬಯಕೆ) ತುಂಬುವುದು ಕಷ್ಟ. ಆದ್ದರಿಂದ ಶಾಶ್ವತ ಶಾಂತಿ-ಸತ್ಯ ಸದಾಶಿವ. ಇಂಥ ಭಾವದ ದರ್ಶನವೇ ಮನುಷ್ಯನಿಗೆ ಸದ್ಗತಿ ನೀಡಲಿದೆ.
ಕೆಲವರು ಕುಡ್ಯಾಕ(ಸರಾಯಿ) ಹುಟ್ಟಿವೇ ಅಂತಾನೇ ಹಗಲು-ರಾತ್ರಿ ಅದರಲ್ಲೇ ಮುಳಗಿರುತ್ತಾರೆ ಇದು ದುರಂತದ ಸಂಗತಿ. ಹಣ, ಮರ್ಯಾದೆ, ಆರೋಗ್ಯ ಹೋಗುತ್ತೆ ಎಂಬ ಕಲ್ಪನೆಯಾದ್ರೂ ಬೇಡವೇ? ಜೀವನ ಆಟೋಟ, ವಿಷಯ ತಿಳವಳಿಕೆ, ಚಿಂತೆಯಲ್ಲಿ ಮುಗಿದು ಹೋಗುತ್ತಿದೆ.
ಯಾವ ಉದ್ದೇಶಕ್ಕೆ ಜಗತ್ತಿಗೆ ಬಂದಿದ್ದೇವೆ ಎಂಬ ಅರಿವು ಮರೆತಾಗ, ವಿಶ್ವ ಪಾವಿತ್ರ್ಯ ಹೋಯಿತು. ಜಗತ್ತು ಅನುಭವಿಸಲು ಆಗುವುದಿಲ್ಲ. ಮನಸ್ಸು ತನ್ಮಯಗೊಳ್ಳುವುದಿಲ್ಲ. ಜನರು ಮೊದಲು ಅತಿಯಾಸೆ ಹಾಗೂ ಮೋಹ ಮುಕ್ತರಾಗಿ, ಉತ್ತಮ ಕಾಯಕದಿಂದ ಬದುಕು ಸಿಂಗರಿಸಿಕೊಳ್ಳಬೇಕು.
ಪ್ರವಚನ: ಶ್ರೀ ಸಿದ್ದೇಶ್ವರ ಸ್ವಾಮೀಜಿ, 10 ನೇ ದಿನ 06-3-2017
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.