ನಮ್ಮ ದಿನನಿತ್ಯದ ಬದುಕಿನಲ್ಲಿ ಮೂರು ರೀತಿಯ ದೋಷಗಳನ್ನು ಕಾಣುತ್ತೇವೆ. ಅವುಗಳ ಕುರಿತು ತಿಳಿವಳಿಕೆ ಇದ್ದಲ್ಲಿ, ಅವುಗಳಿಂದ ಹೊರತಾಗಿ ಬಾಳಲು ಯತ್ನಿಸಬಹುದು.
ನಿತ್ಯ, ಪಾಕ್ಷಿಕ ಹಾಗೂ ಕಾಲ್ಪನಿಕ. ಇವು ಮೂರು ಬಗೆಯ ದೋಷಗಳು. ಹತ್ಯೆ, ಅತ್ಯಾಚಾರ, ವಂಚನೆ, ಕ್ರೌರ್ಯ ಮುಂತಾದವು ನಿತ್ಯದೋಷಗಳು ಎನಿಸಿಕೊಳ್ಳುತ್ತವೆ. ಇವು ಸಮಾಜದಲ್ಲಿ ಸರ್ವಕಾಲಕ್ಕೂ ನಿಂದನೀಯವೇ ಆಗಿವೆ. ಈ ದೋಷವುಳ್ಳವರು ಸಮಾಜದಲ್ಲಿರಲು ಅರ್ಹರಲ್ಲ.
ಕೋಪ, ಸಂತಾಪ ಹಾಗೂ ಆಲಸ್ಯ ಇತ್ಯಾದಿಗಳು ಪಾಕ್ಷಿಕ ದೋಷಗಳು. ಇವುಗಳಲ್ಲಿ ಯಾವುದೇ ಒಂದು ದೋಷವು ಗುಣವಂತನಲ್ಲಿ ಇದ್ದರೆ ಅದನ್ನು ನಿತ್ಯ ದೋಷಗಳಂತೆ ಹೇಯವಾದದ್ದು ಎನ್ನುವಂತಿಲ್ಲ. ಇಂಥ ವ್ಯಕ್ತಿಯಲ್ಲಿನ ಉತ್ತಮ ಗುಣಗಳನ್ನು ಮಾತ್ರ ನಾವು ಸ್ವೀಕರಿಸಬಹುದು.
ಕಾಲ್ಪನಿಕ ದೋಷಗಳು ದೃಷ್ಟಿದೋಷದಿಂದ ಉಂಟಾಗುವವು. ಈ ಮಹಾಕಾರಣದಿಂದಲೇ ಅಂಧಾನುಕರಣೆ, ಅಸ್ಪೃಶ್ಯತೆ, ಜಾತಿ-ಮತಭೇದ, ಬಡತನ ಇಂಥ ಉತ್ಪಾತಗಳು ಸೃಷ್ಟಿಯಾಗುತ್ತವೆ. ಇದರ ಪರಿಣಾಮವೇ ಸಮಾಜದಲ್ಲಿ ಜನ ಶಾಂತಿ-ನೆಮ್ಮದಿಯ ಬದುಕಿನಿಂದ ವಂಚಿತರಾಗಿದ್ದಾರೆ.
ಇದಕ್ಕಿರುವ ಏಕೈಕ ಪರಿಹಾರವೆಂದರೆ ಪ್ರಜ್ಞಾವಂತಿಕೆಯಿಂದ ಯುಕ್ತವಾದ ವಿದ್ಯೆ. ಅಪರಿಮಿತವಾದ ಸಹನೆಯೂ ಇಂಥ ದೋಷಗಳ ನಿವಾರಣೆಗೆ ಸಹಕಾರಿ. ಬದುಕಿನ ದೋಷಗಳ ಅರಿವಿದ್ದಾಗ, ಅವುಗಳ ನಿವಾರಣೆಗೆ ಮಾರ್ಗ ಹುಡುಕಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.